ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಕಥೆ ಏನಾಯ್ತು..? ಚಿತ್ರದ ಶೂಟಿಂಗ್ ಎಲ್ಲಿಗೆ ಬಂತು..? ಇಂತಹ ಹಲವು ಪ್ರಶ್ನೆಗಳಿಗೆ ಚಿತ್ರತಂಡದಿಂದ ಉತ್ತರ ಬಂದಿದೆ. ಚಿತ್ರದ ಶೇ.60ರಷ್ಟು ಭಾಗದ ಶೂಟಿಂಗ್ ಮುಗಿದಿದ್ದು, ಸಂಕೃಆಂತಿ ನಂತರ ಉಳಿದ ಭಾಗದ ಚಿತ್ರೀಕರಣ ಶುರುವಾಗಲಿದೆಯಂತೆ.
ಇನ್ನುಳಿದ ಶೇ.40ರಷ್ಟು ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ನಡೆಸಲು ಪ್ಲಾನ್ ಮಾಡಿದೆ ಚಿತ್ರತಂಡ. ಸದ್ಯಕ್ಕೆ ಸುದೀಪ್, ಕನ್ನಡದಲ್ಲಿ ಪೈಲ್ವಾನ್ ಹಾಗೂ ತೆಲುಗಿನ ಸೈರಾದಲ್ಲಿ ಕಂಪ್ಲೀಟ್ ಬ್ಯುಸಿ. ಬೇಸಗೆ ರಜೆಯ ಹೊತ್ತಿಗೆ ಪೈಲ್ವಾನ್ ತೆರೆಗೆ ಬರಲಿದ್ದು, ಅದಾದ ನಂತರ ಕೋಟಿಗೊಬ್ಬ 3 ರಿಲೀಸ್‍ಗೆ ಪ್ಲಾನ್ ಮಾಡುತ್ತಿದ್ದಾರಂತೆ ಸುದೀಪ್.