` ನಿರ್ಮಾಪಕ ಕೆ. ಮಂಜು.. ಇನ್ನು ಮುಂದೆ ಡಾಕ್ಟರ್ ಕೆ.ಮಂಜು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
producer k manju gets honorary doctrorate
Producer K Manju Gets Doctorate

ನಿರ್ಮಾಪಕ ಕೆ.ಮಂಜು ಅವರನ್ನು ಇನ್ನು ಮುಂದೆ ಡಾ. ಕೆ.ಮಂಜು ಎಂದು ಸಂಬೋಧಿಸಬೇಕು. ಅವರೀಗ ಡಾಕ್ಟರ್ ಮಂಜು ಆಗಿದ್ದಾರೆ. ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್ ವಿಶ್ವವಿದ್ಯಾಲಯ ಕೆ.ಮಂಜು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಸಿನಿಮಾ ಕ್ಷೇತ್ರದಲ್ಲಿ ಕೆ.ಮಂಜು ಅವರ ಸಾಧನೆ ಗುರುತಿಸಿ ಈ ಗೌರವ ನೀಡಿದೆ ವಿಶ್ವ ವಿದ್ಯಾಲಯ. ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಮಂಜು ಅವರಿಗೆ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ.

ಕೆ.ಮಂಜು ತಮ್ಮ ಕೆ.ಮಂಜು ಸಿನಿಮಾಸ್ ಮತ್ತು ಲಕ್ಷ್ಮಿಶ್ರೀ ಕಂಬೈನ್ಸ್ ಬ್ಯಾನರ್‍ಗಳಲ್ಲಿ ಅನುರಾಗ ಸಂಗಮ, ಜಮೀನ್ದಾರ್ರು, ವಾಲಿ, ಜೇನುಗೂಡು, ರಾಜಾಹುಲಿ, ಹೃದಯವಂತ, ಸಾಹುಕಾರ, ಮಾತಾಡ್ ಮಾತಾಡ್ ಮಲ್ಲಿಗೆ, ವಾಲಿ.. ಮೊದಲಾದ ಹತ್ತು ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ