` ಅಮ್ಮನ ಹುಟ್ಟುಹಬ್ಬಕ್ಕೆ ಶಿವಣ್ಣ ಬರಲಿಲ್ಲ. ಏಕೆ ಗೊತ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
why was shivarajkumar absent from parvathamma's birthday award
Parvathamma Rajkumar

ಪಾರ್ವತಮ್ಮ ರಾಜ್‍ಕುಮಾರ್ ಅವರ ಹುಟ್ಟುಹಬ್ಬ, ಡಾ.ರಾಜ್‍ಕುಮಾರ್ ಸೌಹಾರ್ದ ಪ್ರಶಸ್ತಿ ವಿತರಣೆಯಲ್ಲಿ ಸಾಮಾನ್ಯವಾಗಿ ಇಡೀ ರಾಜ್ ಕುಟುಂಬ ಇರುತ್ತಿತ್ತು. ಆದರೆ, ಡಿಸೆಂಬರ್ 6ರಂದು ನಡೆದ ಆ ಕಾರ್ಯಕ್ರಮದಲ್ಲಿ ಶಿವರಾಜ್‍ಕುಮಾರ್ ಇರಲಿಲ್ಲ. ಶಿವಣ್ಣ ಗೈರು ಹಾಜರಿಯ ಕಾರಣವನ್ನು ಸ್ವತಃ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.

ಶಿವರಾಜ್‍ಕುಮಾರ್, ಪಾರ್ವತಮ್ಮ ಹುಟ್ಟುಹಬ್ಬದ ದಿನ ಪೂನಾದಲ್ಲಿದ್ದರು. ರುಸ್ತುಂ ಚಿತ್ರದ ಚಿತ್ರೀಕರಣದಲ್ಲಿದ್ದರು. ಶಿವಣ್ಣ ಬಂದರೆ, ಇಡೀ ಚಿತ್ರತಂಡಕ್ಕೆ ನಷ್ಟವಾಗುತ್ತಿತ್ತು. ನಿರ್ಮಾಪಕರಿಗೆ ನಷ್ಟವಾಗದಂತೆ ನೋಡಿಕೊಳ್ಳಬೇಕಾದ್ದು ಕಲಾವಿದರ ಜವಾಬ್ದಾರಿ ಅನ್ನೋದು ಅಪ್ಪಾಜಿ ಪಾಲಿಸಿ. ಶಿವಣ್ಣ, ಅಪ್ಪಾಜಿಯ ಮಾತನ್ನು ಪಾಲಿಸಿದ್ದಾರೆ. ಹೀಗಾಗಿ ಅಮ್ಮನ ಹುಟ್ಟುಹಬ್ಬಕ್ಕೆ ಬರಲಿಲ್ಲ ಎಂದಿದ್ದಾರೆ ಪುನೀತ್.

Adi Lakshmi Purana Movie Gallery

Rightbanner02_butterfly_inside

Yaana Movie Gallery