ಸಲಾಂ ರಾಖಿ ಭಾಯ್ ಹಾಡು ರಿಲೀಸ್ ಮಾಡಿ ಹವಾ ಎಬ್ಬಿಸಿರುವ ಕೆಜಿಎಫ್ ಟೀಂ, ಹಾಡಿನ ಗುಂಗು ಗುಂಯ್ ಅಂತಿರೋವಾಗ್ಲೇ ಇನ್ನೊಂದು ಅಬ್ಬರದ ಸುಳಿವು ಕೊಟ್ಟಿದೆ. ಬೆನ್ನಲ್ಲೇ ಕೆಜಿಎಫ್‍ನ 2ನೇ ಟ್ರೇಲರ್ ರಿಲೀಸ್ ಮಾಡೋದಾಗಿ ಹೇಳಿದೆ.
ರವಿ ಬಸ್ರೂರು ನಿರ್ದೇಶನದ ಸಲಾಂ ರಾಖಿ ಭಾಯ್ ಹಾಡು ರಾಕಿಂಗ್ ಸ್ಟಾರ್ ಯಶ್
ಅಭಿಮಾನಿಗಳಿಗಂತೂ ಥ್ರಿಲ್ ಕೊಟ್ಟಿದೆ. ಕೆಲವು ಕನ್ನಡ ಪರ ಸಂಘಟನೆಯವರು ಹಾಡಿನಲ್ಲಿ ಹಿಂದಿಯೇ ತುಂಬಿದೆ ಎಂಬ ಅಪಸ್ವರವನ್ನೂ ಎತ್ತಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಅಬ್ಬರವಿದೆ. ಈ ಹಾಡಿನ ಅಬ್ಬರ ಜೋರಾಗಿರುವಾಗಲೇ 2ನೇ ಟ್ರೇಲರ್ ರಿಲೀಸ್ ಮಾಡುತ್ತಿದೆ ಚಿತ್ರತಂಡ.
ನಿರ್ದೇಶಕ ಪ್ರಶಾಂತ್ ನೀಲ್ ಅಪ್ಪಟ ಕಸುಬುದಾರಿಕೆ ಹಾಗೂ ಹೊಂಬಾಳೆ ಬ್ಯಾನರ್‍ನ ಕಮಿಟ್‍ಮೆಂಟ್, ಚಿತ್ರದ ಪ್ರಚಾರದಲ್ಲಿ ಎದ್ದು ಕಾಣುತ್ತಿರುವುದು ವಿಶೇಷ.