ದಮಯಂತಿ ಚಿತ್ರದಲ್ಲಿ ಅಘೋರಿಯಾಗಿ ನಟಿಸುತ್ತಿರುವ ರಾಧಿಕಾ ಕುಮಾರಸ್ವಾಮಿ, ಆ ಚಿತ್ರಕ್ಕಾಗಿ 1 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇಂಥದ್ದೊಂದು ಗುಸುಗುಸು ಗಾಂಧಿನಗರದಲ್ಲಿ ಓಡಾಡುತ್ತಿದೆ. ಈಗಾಗಲೇ ಶೇ. 80 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, 80 ಲಕ್ಷ ರೂ.ಗಳನ್ನು ಅಡ್ವಾನ್ಸ್ ಆಗಿ ಕೊಟ್ಟಿದೆಯಂತೆ.
ಅನುಷ್ಕಾ ಶೆಟ್ಟಿಯವರನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಿದ್ದ ಪಾತ್ರ, ಅವರ ಡೇಟ್ಸ್ ಸಿಗದ ಕಾರಣ ರಾಧಿಕಾ ಕುಮಾರಸ್ವಾಮಿ ಪಾಲಾಯಿತು. ನವರಸನ್ ನಿರ್ದೇಶನದ ಚಿತ್ರಕ್ಕೆ ಅವರೇ ನಿರ್ಮಾಪಕರು. 80ರ ದಶಕದ ಕಥೆಗೆ, ಈಗಿನ ವಾಸ್ತವದ ಕಥೆಯೂ ಮಿಕ್ಸ್ ಆಗಿದೆ. ಚಿತ್ರದ ರಷಸ್ಗಳು ಅದ್ಭುತವಾಗಿ ಮೂಡಿ ಬಂದಿವೆ ಎನ್ನುತ್ತಿದೆ ಚಿತ್ರತಂಡ.