` ಅಂಬಿ ನೆನಪಲ್ಲಿ ಡಾ.ರಾಜ್ ಸಂಸ್ಕಾರ ದಿನವನ್ನು ನೆನಪಿಸಿಕೊಂಡ ಸಿಎಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hd kumaraswamya remembers dr raj's funeral
HD Kuamraswamy, Dr Rajkumar

ಅಂಬರೀಷ್ ಅವರ ನಿಧನದ ನಂತರ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದ ಸಿಎಂ ಕುಮಾರಸ್ವಾಮಿ ಹಾಗೂ ಪೊಲೀಸ್ ಸಿಬ್ಬಂದಿ ಎಲ್ಲೆಡೆ ಪ್ರಶಂಸೆಗೆ ಪಾತ್ರರಾದರು. ಅಂಬರೀಷ್ ಅವರ ಹೃದಯವೇ ಆಗಿದ್ದ ಮಂಡ್ಯದಲ್ಲಿ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಕುಮಾರಸ್ವಾಮಿ, ನಂತರ ಅಂಬರೀಷ್ ಅವರನ್ನು ರಾಜನಂತೆಯೇ ಬೀಳ್ಕೊಟ್ಟರು. ಹೀಗೆ ಮೆಚ್ಚುಗೆ ಗಳಿಸಿದ ಇದೇ ಕುಮಾರಸ್ವಾಮಿಯವರೇ ಡಾ.ರಾಜ್ ನಿಧನರಾದಾಗಲೂ ಮುಖ್ಯಮಂತ್ರಿ. ಡಾ.ರಾಜ್ ಅಂತ್ಯ ಸಂಸ್ಕಾರದ ವೇಳೆ ನಡೆದ ಘಟನೆಗಳನ್ನು ಸ್ವತಃ ಕುಮಾರಸ್ವಾಮಿಯವರೇ ಅಂಬಿ ನಮನ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.

`ಅದೃಷ್ಟವೋ.. ದುರದೃಷ್ಟವೋ ಗೊತ್ತಿಲ್ಲ. ನಾನು ಸಿಎಂ ಆಗಿದ್ದಾಗಲೇ ಇಬ್ಬರು ಮೇರುನಟರು ನಮ್ಮನ್ನಗಲಿದರು. ಅಂತಹವರ ಅಂತ್ಯಕ್ರಿಯೆ ನಡೆಸುವ ಸಂದರ್ಭ ನನಗೆ ಒದಗಿಬಂತು. ಡಾ.ರಾಜ್ ಅಂತ್ಯಕ್ರಿಯೆಯಲ್ಲಿ ಆದ ಗೊಂದಲಗಳು, ನಡೆದ ಘಟನೆಗಳ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ. ಆಸ್ಪತ್ರೆಯವರು ಸುದ್ದಿಯನ್ನು ಮೊದಲು ಸರ್ಕಾರಕ್ಕೆ ತಿಳಿಸದೆ ಮಾಧ್ಯಮಗಳಿಗೆ ತಿಳಿಸಿದ್ದು ಅಷ್ಟೆಲ್ಲ ದುರಂತಗಳಿಗೆ ಕಾರಣವಾಯಿತು. ಡಾ.ರಾಜ್ ಕುಟುಂಬಕ್ಕೂ ಸರಿಯಾಗಿ ಸಂಸ್ಕಾರ ಮಾಡಲು ಆಗಲಿಲ್ಲ.ಆದರೆ ಅಂಬರೀಷ್ ವಿಷಯದಲ್ಲಿ ಹಾಗಾಗಲಿಲ್ಲ. ಆಸ್ಪತ್ರೆಯಿಂದ ಸುದ್ದಿ ತಿಳಿದು, ಸಿದ್ಧತೆ ಮಾಡಿಕೊಳ್ಳಲಾಯ್ತು' ಎಂದು ತಿಳಿಸಿದರು.

Shivarjun Movie Gallery

KFCC 75Years Celebrations and Logo Launch Gallery