` ನಾನೂ ಅತ್ತರೆ ಅಪ್ಪ ಬೈತಾರೆ - ಅಭಿಷೇಕ್ ಅಂಬರೀಷ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
abhishek ambareesh steals fans hearts again
Abhishek Ambareesh

ನಾನು ಅಳ್ತಾ ಇಲ್ಲ. ನಾನು ಅಳೋದಿಲ್ಲ. ನಾನೇನಾದರೂ ಅತ್ತರೆ.. ಮೇಲಿರೋ ಅಪ್ಪ ನನಗೆ ಬೈತಾರೆ. ಅಭಿಷೇಕ್ ಅಂಬರೀಷ್ ಆ ಮಾತು ಹೇಳುವಾಗ, ಅಂಬಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ ಭಾವುಕರಾಗಿದ್ದರು. ಫಿಲಂ ಚೇಂಬರ್ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅಭಿಷೇಕ್, ತಂದೆಯೊಂದಿಗೆ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

`ನಾನು ಚಿಕ್ಕ ಹುಡುಗನಾಗಿದ್ದಾಗ ಸಿಂಗಾಪುರ್‍ಗೆ ಹೋಗಿದ್ವಿ. ಅಪ್ಪನಿಗೆ ಗೆಳೆಯರ ಬಳಗವಿತ್ತು. ರೂಮ್‍ನಲ್ಲಿ ಅಪ್ಪ ಗೆಳೆಯರೊಂದಿಗೆ ಇರುತ್ತಿದ್ದರು. ಅಮ್ಮನಿಗೆ ಹೊರಗೆ ಓಡಾಡುವ ಆಸೆ. ಒಂದು ದಿನ ಬೆಳಗ್ಗೆ ಶಾಪಿಂಗ್‍ಗೆ ಹೋಗುತ್ತಿದ್ದೇನೆ, ಬೇಗ ಬರುತ್ತೇನೆ ಎಂದು ಟಿವಿ ಮೇಲೆ ಪೇಪರ್ ಅಂಟಿಸಿಟ್ಟು ಹೋಗಿಬಿಟ್ಟರು. ಎದ್ದು ನೋಡಿದಾಗ ಅಮ್ಮ ಇಲ್ಲ. ಅಪ್ಪನೂ ನೋಡ್ತಿದ್ದಾರೆ. ನನಗೋ ಹೆದರಿಕೆ. ಅಳೋಕೆ ಶುರು ಮಾಡಿದೆ.

ಅಪ್ಪ ಏನು ಅಂದ್ರು. ಟಾಯ್ಲೆಟ್‍ಗೆ ಹೋಗಬೇಕು ಅಂದೆ. ಅದು ನನ್ನನ್ನು ಅಪ್ಪ ಮೊದಲಿಗೆ ಹಾಗೆಲ್ಲ ನೋಡಿಕೊಂಡ ದಿನ. ಆಯ್ತು. ಸ್ವಲ್ಪ ಹೊತ್ತಿಗೆ ಮತ್ತೆ ಅಳೋಕೆ ಶುರು ಮಾಡಿದೆ. ಏನು ಅಂದ್ರು. ಹಲ್ಲುಜ್ಜಬೇಕು ಅಂದೆ. ಹಲ್ಲುಜ್ಜಿಸಿದ್ರು. ಅದಾದ ಸ್ವಲ್ಪ ಹೊತ್ತಿಗೆ ಮತ್ತೆ ಅಳೋಕೆ ಶುರು ಮಾಡ್ದೆ. ಏನು ಅಂದ್ರು. ಕಿರುಬೆರಳು ಎತ್ತಿ ತೋರಿಸಿದೆ. ಟಾಯ್ಲೆಟ್ ಮೇಲೆ ನಿಲ್ಲಿಸಿ, ಏನಾದರೂ ಮಾಡ್ಕೋ ಅಂದ್ರು. 

ಅಷ್ಟೆಲ್ಲ ಆಗುವ ಹೊತ್ತಿಗೆ ಅಮ್ಮ ಬಂದ್ರು. ಇವನನ್ನ ನನ್ನ ಜೊತೆ ಬಿಟ್ಟು ಎಲ್ಲಿ ಹೋಗಿದ್ದೆ ಅಂತಾ ಅಮ್ಮನ ಮೇಲೆ ರೇಗಿದ್ರು...'' ಹೀಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು ಅಭಿ.

Sagutha Doora Doora Movie Gallery

Popcorn Monkey Tiger Movie Gallery