#ಬಾಂಗ್ ವೆಡ್ಸ್ ಬೊಮ್ಮನ್ ಅನ್ನೊದು ಹ್ಯಾಷ್‍ಟ್ಯಾಗ್. ಇದು ಐಂದ್ರಿತಾ ರೇ ಮತ್ತು ದಿಗಂತ್ ತಮ್ಮ ಮದುವೆ ಆಹ್ವಾನಕ್ಕೆ ಸ್ವತಃ ಸೃಷ್ಟಿಸಿರುವ ಹ್ಯಾಷ್‍ಟ್ಯಾಗ್. ಐಂದ್ರಿತಾ ಬಂಗಾಳಿ ಹುಡುಗಿ. ಹೀಗಾಗಿ (bang)ಬಾಂಗ್. ದಿಗಂತ್ ಬ್ರಾಹ್ಮಣರ ಹುಡುಗ. ಹೀಗಾಗಿ ಬೊಮ್ಮನ್. (bomman). ಹೀಗೆ ತಮ್ಮದೇ ಶೈಲಿಯಲ್ಲಿ ಡಿಫರೆಂಟಾಗಿ ಆಹ್ವಾನ ಕೊಡುತ್ತಿದ್ದಾರೆ ದಿಗಂತ್ ಮತ್ತು ಐಂದ್ರಿತಾ.
ಮದುವೆ ಮನೆಯಲ್ಲಿ ಬಂಗಾಳಿ ಶೈಲಿಯ ಸೋಲನ್‍ಗುರ್ ರಸಗುಲ್ಲ ಮತ್ತು ಬ್ರಾಹ್ಮಣರ ಸ್ಪೆಷಲ್ ಮಿಡಿ ಉಪ್ಪಿನಕಾಯಿ ಇರುತ್ತದಂತೆ.