` ನಾನು ಸೆಕೆಂಡ್ ಪ್ರಭಾಸ್ ಅಲ್ಲ.. ಫಸ್ಟ್ ಯಶ್ - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
dont compare me and other film hero's
Yash

ಪ್ರಭಾಸ್. ಬಾಹುಬಲಿ ನಂತರ ಭಾರತದ ಸ್ಟಾರ್ ಆದ ನಟ. ತೆಲುಗಿನಲ್ಲಂತೂ ಸೂಪರ್ ಸ್ಟಾರ್. ಯಶ್, ಕನ್ನಡದ ರಾಕಿಂಗ್ ಸ್ಟಾರ್. ರಾಜಾಹುಲಿ, ಕಿರಾತಕ, ಮಾಸ್ಟರ್‍ಪೀಸ್.. ಇವೆಲ್ಲ ಅವರ ಸಿನಿಮಾ ಹೆಸರುಗಳೂ ಹೌದು. ಅಭಿಮಾನಿಗಳು ಕರೆಯುವ ಹೆಸರುಗಳೂ ಹೌದು. ಈಗ..  ಕೆಜಿಎಫ್ ಮೂಲಕ ಇಡೀ ಇಂಡಿಯಾವನ್ನು ಸೆಳೆದಿರುವ ನಟ. ಆದರೆ, ಕೆಲವರು ಯಶ್‍ರನ್ನು ಪ್ರಭಾಸ್‍ಗೆ ಹೋಲಿಸಿದ್ದಾರೆ. ಯಶ್‍ರನ್ನು ಸೆಕೆಂಡ್ ಪ್ರಭಾಸ್ ಎಂದಿದ್ದಾರೆ.

ನಾನು ಸೆಕೆಂಡ್ ಪ್ರಭಾಸ್ ಅಲ್ಲ, ಫಸ್ಟ್ ಯಶ್ ಆಗಿರೋದಕ್ಕೆ ಇಷ್ಟ ಪಡುತ್ತೇನೆ. ನಮ್ಮ ಸಿನಿಮಾ ಕೆಜಿಎಫ್ ಕೂಡಾ ವಿಭಿನ್ನ. ಆ ಸಿನಿಮಾವನ್ನು ಇನ್ನೊಂದು ಸಿನಿಮಾಗೆ ಹೋಲಿಸಬೇಡಿ ಎಂದಿದ್ದಾರೆ ಯಶ್.

ಹೊಂಬಾಳೆ ಬ್ಯಾನರ್‍ನ ಕೆಜಿಎಫ್‍ಗೆ ಪ್ರಶಾಂತ್ ನೀಲ್ ನಿರ್ದೇಶಕ. ಡಿಸೆಂಬರ್ 21ರಂದು ಐದೂ ಭಾಷೆಗಳಲ್ಲಿ ಕೆಜಿಎಫ್ ರಿಲೀಸ್ ಆಗುತ್ತಿದೆ. ಈಗ ಎಲ್ಲೆಲ್ಲೂ ಕೆಜಿಎಫ್ ಹವಾ.

Kaalidasa Kannada Mestru Movie Gallery

Kabza Movie Launch Gallery