` ಇಷ್ಟ ಇದ್ರೆ ಮಾಡಿ.. ಇಲ್ಲದಿದ್ರೆ ಏನೂ ಬೇಡ ಬಿಡಿ - ಭಾರತಿ ವಿಷ್ಣುವರ್ಧನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bharathi vishnuvardhan talks about vishnu memorial issue
Bharathi Vishnuvardhan

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿವಾದ ಮತ್ತೆ ಜೋರಾಗಿದೆ. ವಿಷ್ಣುವರ್ಧನ್ ಸ್ಮಾರಕ ಎಲ್ಲಿ ಮಾಡಬೇಕು ಅನ್ನೋದು ದೊಡ್ಡ ವಿವಾದವನ್ನೇ ಎಬ್ಬಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತಿ ವಿಷ್ಣುವರ್ಧನ್ `ವಿಷ್ಣು ನಮ್ಮ ಮನೆಯಲ್ಲಿ, ಅಭಿಮಾನಿಗಳ ಹೃದಯದಲ್ಲಿ ಜೀವಂತವಿದ್ದಾರೆ. ನಮಗೂ ಕೇಳಿ ಕೇಳಿ ಸಾಕಾಗಿದೆ. ಇಷ್ಟ ಇದ್ರೆ ಸ್ಮಾರಕ ಮಾಡಿ. ಇಲ್ಲದಿದ್ರೆ ಬಿಟ್ಟು ಬಿಡಿ. ವಿವಾದವೂ ಬೇಡ. ಸ್ಮಾರಕವೂ ಬೇಡ' ಎಂದಿದ್ದಾರೆ.

ಹತಾಶೆಯಿಂದಲೇ ಮಾತನಾಡಿರುವ ಭಾರತಿ ಗೀತಾಬಾಲಿ ಕುಟುಂಬದ ಆಸ್ತಿ ಜಗಳ ಮುಗಿಯುವುದಿಲ್ಲ. ವಿಷ್ಣು ಪುಣ್ಯಭೂಮಿಯಲ್ಲಿ ಈಗಿರುವ ಸ್ಮಾರಕವನ್ನು ನಾವೇ ನಮ್ಮ ಸ್ವಂತ ಖರ್ಚಿನಲ್ಲೇ ಕಟ್ಟಿದ್ದೇವೆ. ಸರ್ಕಾರವನ್ನೇ ನಂಬಿಕೊಂಡಿದ್ದರೆ ಅದೂ ಆಗುತ್ತಿರಲಿಲ್ಲ. ಸರ್ಕಾರಕ್ಕೆ ಎಲ್ಲಿ ಇಷ್ಟವಿದೆಯೋ ಅಲ್ಲಿಯೇ ಸ್ಮಾರಕ ಮಾಡಲಿ. ನಮ್ಮ ಅಭ್ಯಂತರವೇನಿಲ್ಲ. ಇಷ್ಟೆಲ್ಲ ವಿವಾದ ಮಾಡಿಕೊಂಡು ಸ್ಮಾರಕ ಮಾಡಿಸಿಕೊಳ್ಳಬೇಕೆ..? ಎಂದು ಪ್ರಶ್ನಿಸಿದ್ದಾರೆ ಭಾರತಿ.

ಇಂದು ಭಾರತಿ ಕುಟುಂಬ ಶಾಸಕ ಮುನಿರತ್ನ ಅವರ ಮನೆಗೆ ತೆರಳಿ ವಿವಾದ ಬಗೆಹರಿಸುವಂತೆ ಮನವಿ ಮಾಡಿಕೊಳ್ಳಲಿದೆ.

Geetha Movie Gallery

Ombattane Dikku Launch Meet Gallery