ಅಂಬರೀಷ್ ಅಂಕಲ್ ಒಬ್ಬ ನಟರಾಗಿ, ರಾಜಕಾರಣಿಯಾಗಿ, ಸ್ನೇಹಿತರಾಗಿ ಎಲ್ಲರ ಜೊತೆ ಚೆನ್ನಾಗಿದ್ದರು. ಈ ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಒಳ್ಳೆಯ ಮನುಷ್ಯ. ಯಾರಿಗೂ, ಎಂದಿಗೂ ಕೆಡುಕನ್ನು ಬಯಸಿದವರಲ್ಲ. ಅವರನ್ನು ಈ ರೀತಿ ನೋಡಲು ನಮಗೆ ಬೇಸರವಾಗುತ್ತಿದೆ.
ನಮಗೆ ಒಬ್ಬ ತಂದೆಯಂತೆಯೇ ಮಾರ್ಗದರ್ಶಕರಾಗಿದ್ದರು. ಅವರು ನಮ್ಮ ಜೊತೆಗಿಲ್ಲ ಎಂದುಕೊಳ್ಳೋದು ಬೇಡ. ಅವರ ಒಳ್ಳೆಯತನವನ್ನು ನೆನಪು ಮಾಡಿಕೊಳ್ಳೋಣ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸುಮಲತಾ, ಅಭಿಷೇಕ್ ಜೊತೆ ನಾವು ಯಾವಾಗಲೂ ಇರುತ್ತೇವೆ.
ಇದು ಶಿವರಾಜ್ಕುಮಾರ್ ಅಂಬರೀಷ್ ಅವರ ಬಗ್ಗೆ ಹೇಳಿದ ಮಾತು. ರಾಜ್ ಮನೆತನಕ್ಕೆ ಆಪ್ತರಾಗಿದ್ದ ಅಂಬಿ, ಪುನೀತ್ರನ್ನು ಎತ್ತಿ ಆಡಿಸಿದವರು. ಮನೆಯವರೊಂದಿಗೆ ಒಡನಾಟ ಇಟ್ಟುಕೊಂಡಿದ್ದವರು. ರಾಜ್ ಮನೆಯಲ್ಲಿ ಏನೇ ಸಂಭ್ರಮವಿರಲಿ, ದುಃಖವಿರಲಿ.. ಅಲ್ಲಿ ಅಂಬಿ ಇರುತ್ತಿದ್ದರು. ಇರಲೇಬೇಕಿತ್ತು.
ಶಿವಣ್ಣನ ಜೊತೆ ದೇವರ ಮಗ ಚಿತ್ರದಲ್ಲಿ ತಂದೆಯ ಪಾತ್ರದಲ್ಲಿ ನಟಿಸಿದ್ದರು ಅಂಬರೀಷ್.