` ಹಠಮಾರಿ ಅಂಬಿಯನ್ನು ಪ್ರೀತಿಯಿಂದ ಒಪ್ಪಿಸಿದ್ದ ಸುದೀಪ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep convinced ambi to act in ambi ninge vaisaitho
Ambareesh, Sudeep

ರೆಬಲ್ಸ್ಟಾರ್ ಅಂಬರೀಷ್ ನಟಿಸಿದ, ಬಿಡುಗಡೆಯಾಗಿರುವ ಕೊನೆಯ ಚಿತ್ರ ಅಂಬಿ ನಿಂಗ್ ವಯಸ್ಸಾಯ್ತೋ. ಬಿಡುಗಡೆಯಾಗಬೇಕಿರುವ ಕೊನೆಯ ಚಿತ್ರ ಕುರುಕ್ಷೇತ್ರ. ಅಂಬಿ ನಿಂಗ್ ವಯಸ್ಸಾಯ್ತೊ ಸಿನಿಮಾ, ತಮಿಳಿನ ಪವರ್ ಪಾಂಡಿ ಚಿತ್ರದ ರೀಮೇಕ್. ಆ ಚಿತ್ರವನ್ನು ಒಪ್ಪಿಕೊಳ್ಳೋಕೆ ಕಾರಣವಾಗಿದ್ದು ಇಬ್ಬರ ಪ್ರೀತಿ.  ಗೆಳೆಯ ರಜನಿಕಾಂತ್ ಹಾಗೂ ಸುದೀಪ್ ಮೇಲಿನ ಪ್ರೀತಿಗೆ ಒಪ್ಪಿ ನಟಿಸಿದ್ದರು ಅಂಬಿ.

ಅಷ್ಟೇ ಅಲ್ಲ, ಚಿತ್ರದ ಪ್ರತಿ ಹಂತದಲ್ಲೂ ಸಹಕಾರ ಕೊಟ್ಟಿದ್ದರು ಅಂಬರೀಷ್. ಸಿನಿಮಾ ರಿಲೀಸ್ ವೇಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಅಂಬರೀಷ್, ಆಂಬುಲೆನ್ಸ್ನಲ್ಲಿ ಹೋಗಿ ಸಿನಿಮಾ ನೋಡಿಕೊಂಡು ಬಂದಿದ್ದರು. ಆ ಚಿತ್ರದ  ಹೇ ಜಲೀಲ.. ಕನ್ವರ್ಲಾಲ ಎಂಬ ಪ್ರೇಮ್ ಬರೆದಿರುವ ಹಾಡು, ಅಕ್ಷರಶಃ ಅಂಬರೀಷ್ ವ್ಯಕ್ತಿತ್ವ ಎಂದರೆ ತಪ್ಪೇನಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery