ಸ್ಯಾಂಡಲ್‍ವುಡ್‍ನಲ್ಲಿ ಡಿಸೆಂಬರ್ ಬಂತೆಂದರೆ ಅದು ಸಂಭ್ರಮದ ತಿಂಗಳು. ಈ ವರ್ಷವೂ ಅಷ್ಟೆ.. ಡಿಸೆಂಬರ್ 11,12ಕ್ಕೆ ದಿಗಂತ್-ಐಂದ್ರಿತಾ ಮದುವೆ ಸುದ್ದಿ ಹೊರಬಿದ್ದ ಬೆನ್ನಲ್ಲೇ.. ಮತ್ತೊಂದು ಶುಭ ವಿವಾಹಕ್ಕೆ ಶುಭ ಘಳಿಗೆ ಕೂಡಿ ಬಂದಿದೆ. ಅದೇ ದಿನ...
ಅದೇ ಡಿಸೆಂಬರ್ 12ರಂದು ದಿಲ್‍ವಾಲಾ ಸುಮಂತ್ ಸಪ್ತಪದಿ ತುಳಿಯುತ್ತಿದ್ದಾರೆ. ಶ್ರೀನಿವಾಸ್ ನರಸಪ್ಪ ಮತ್ತು ಚಂದ್ರಕಲಾ ದಂಪತಿಯ ಪುತ್ರಿ ಅನಿತಾ ಎಂಬುವವರನ್ನು ಮದುವೆಯಾಗುತ್ತಿದ್ದಾರೆ ಸುಮಂತ್. ನಿರ್ಮಾಪಕ ಶೈಲೇಂದ್ರ ಬಾಬು, ಪೂರ್ಣಿಮಾ ದಂಪತಿಯ ಮಗನಾದ ಸುಮಂತ್, ಚಿತ್ರರಂಗಕ್ಕೆ ಬಂದಿದ್ದು ಆಟ ಚಿತ್ರದಿಂದ. ಹೆಸರು ಗಳಿಸಿದ್ದು ದಿಲ್‍ವಾಲಾ ಚಿತ್ರದಿಂದ. ಇತ್ತೀಚೆಗೆ ಬ್ರಾಂಡ್ ಬಾಬು ಚಿತ್ರದ ಮೂಲಕ ತೆಲುಗಿಗೂ ಕಾಲಿಟ್ಟಿರುವ ಸುಮಂತ್, ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಒಟ್ಟಿನಲ್ಲಿ ಡಿಸೆಂಬರ್ 12, ಸ್ಯಾಂಡಲ್‍ವುಡ್‍ಗೆ ಡಬಲ್ ಧಮಾಕಾ.