ಕ್ರೇಜಿ ಸ್ಟಾರ್ ರವಿಚಂದ್ರನ್ರ ಹಿರಿಯ ಮಗ ಮನೋರಂಜನ್ ಚಿತ್ರರಂಗದಲ್ಲಿ ಹೆಜ್ಜೆಯಿಟ್ಟಿದ್ದಾರೆ. ದೊಡ್ಡ ಹಿಟ್ ಇನ್ನೂ ಸಿಕ್ಕದೇ ಇದ್ದರೂ, ಭರವಸೆ ಮೂಡಿಸಿದ್ದಾರೆ. ಈಗ ರವಿಚಂದ್ರನ್ರ ಇನ್ನೊಬ್ಬ ಪುತ್ರ ವಿಕ್ರಂ, ಚಿತ್ರರಂಗಕ್ಕೆ ಬರಲು ರೆಡಿಯಾಗಿದ್ದಾರೆ. ವಿಕ್ರಂ ರಂಗ ಪ್ರವೇಶಕ್ಕೆ ಓಕೆ ಎಂದಿರುವುದು ರವಿಚಂದ್ರನ್. ವಿಕ್ರಂಗಾಗಿ ಹಲವು ಕಥೆ ಕೇಳಿದ್ದ ರವಿಚಂದ್ರನ್ ಸಹನಾ ಮೂರ್ತಿಯವರಿಗೆ ಓಕೆ ಎಂದಿದ್ದಾರೆ.
ಈ ಮೊದಲು ರೋಜ್ ಮತ್ತು ಮಾಸ್ಲೀಡರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸಹನಾಮೂರ್ತಿ, ಒಂದು ಪ್ರೇಮಕಥೆ ರೆಡಿ ಮಾಡಿದ್ದಾರೆ. ಅದನ್ನು ರವಿಚಂದ್ರನ್ ಅವರಿಗೆ ಹೇಳಿದ್ದಾರೆ. ವಿಕ್ರಂಗೆ ಈ ಕಥೆ ಸೂಟ್ ಆಗುತ್ತೆ ಎಂದು ಯೆಸ್ ಎಂದಿದ್ದಾರೆ ರವಿಚಂದ್ರನ್. ಫೆಬ್ರವರಿ 1ರಂದು ಅರ್ಥಾತ್ ಪ್ರೇಮಿಗಳ ದಿನದಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಯುಗಾದಿಗೆ ಚಿತ್ರೀಕರಣ ಶುರುವಾಗಲಿದೆ. ಸೋಮಶೇಖರ್ ಮತ್ತು ಸುರೇಶ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ನಾಗಶೇಖರ್ ನಿರ್ದೇಶನದಲ್ಲಿ ನವೆಂಬರ್ನಲ್ಲಿ ನಾನು ಮತ್ತು ಅವಳು ಚಿತ್ರಕ್ಕೆ ವಿಕ್ರಂ ರೆಡಿಯಾಗಿದ್ದರು. ಆದರೆ ನಾಗಶೇಖರ್.. ಅಮರ್ ಅಂಬರೀಷ್ ಸಿನಿಮಾಕ್ಕೆ ಹೊರಳಿದ ಕಾರಣ, ಆ ಚಿತ್ರ ಮುಂದಕ್ಕೆ ಹೋಗಿತ್ತು. ಈಗ ಮತ್ತೊಮ್ಮೆ ವಿಕ್ರಂ ಕ್ರೇಜಿ ಎಂಟ್ರಿಗೆ ರಂಗ ಸಿದ್ಧವಾಗಿದೆ.