` ನಾನು ಚಿತ್ರದಲ್ಲಿ ಖಳನಾಯಕ.. ರಿಯಲ್ ಲೈಫ್‍ನಲ್ಲಿ ಕರುಣಾಮಯಿ' - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
danny sapani talks about his role in tarakasura
Tarakasura

ಡ್ಯಾನಿ ಸಪಾನಿ. ಹಾಲಿವುಡ್ ನಟ. ಎತ್ತರದ ದೈತ್ಯ ದೇಹ. ಕಪ್ಪು ಮೈಬಣ್ಣ. ಗುಂಗುರು ಕೂದಲು. ಬೆಂಕಿ ಕಾರುವ ಕಣ್ಣುಗಳು.. ಇವು ಡ್ಯಾನಿ ಸಪಾನಿಯ ಟ್ರೇಡ್ ಮಾರ್ಕುಗಳು. ಒಳ್ಳೆಯ ಆ್ಯಕ್ಟಿಂಗೂ ಗೊತ್ತಿರುವ ಡ್ಯಾನಿ, ಹಾಲಿವುಡ್‍ನಲ್ಲಷ್ಟೇ ಅಲ್ಲ, ಬಾಲಿವುಡ್, ಟಾಲಿವುಡ್, ಕಾಲಿವುಡ್‍ಗಳಲ್ಲೂ ಬ್ಯುಸಿಯಾಗಿದ್ದವರು. ಈಗ ಸ್ಯಾಂಡಲ್‍ವುಡ್‍ನಲ್ಲಿ ಅವರು ನಟಿಸಿರುವ ತಾರಕಾಸುರ ರಿಲೀಸ್ ಆಗುತ್ತಿದೆ. ಈ ಕುರಿತು ಅಮೆರಿಕದಿಂದಲೇ ಮಾತನಾಡಿರುವ ಡ್ಯಾನಿ `

ಚಂದ್ರಶೇಖರ್ ಬಂಡಿಯಪ್ಪ ಮತ್ತು ತಾರಕಾಸುರ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದು ನನಗೆ ಒಂದು ಅದ್ಭುತ ಅನುಭವ. ಈ ಚಿತ್ರದಲ್ಲಿ ನನ್ನದು ವಿಲನ್ ಪಾತ್ರ. ಕ್ರೂರ, ನಂಬಿಕೆಗೆ ಅರ್ಹನಲ್ಲದ, ಕಲ್ಲು ಹೃದಯದ, ನೋಡಿದವರನ್ನು ನಡುಗಿಸುವ ವ್ಯಕ್ತಿ. ಪಾತ್ರ ಚೆನ್ನಾಗಿದೆ. ಆದರೆ, ರಿಯಲ್ ಲೈಫ್‍ನಲ್ಲಿ ನಾನು ಹಾಗಿಲ್ಲ. ಮುಂದೊಂದು ದಿನ ನನಗೆ ಒಳ್ಳೆಯ ಪಾತ್ರಗಳೂ ಸಿಗುತ್ತವೆ ಎಂಬ ನಂಬಿಕೆ ಇದೆ. ತಾರಕಾಸುರ ಚಿತ್ರದಲ್ಲಿ ನನ್ನ ಡೈಲಾಗ್‍ಗಳು ಚೆನ್ನಾಗಿವೆ. ಸದ್ಯಕ್ಕೆ ಅವು ಸ್ಪಷ್ಟವಾಗಿ ನೆನಪಿಗೆ ಬರುತ್ತಿಲ್ಲ' ಎಂದಿದ್ದಾಋರೆ. 

ತಾರಕಾಸುರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ ಡ್ಯಾನಿ. ವೈಭವ್-ಮಾನ್ವಿತಾ ಕಾಮತ್ ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ನರಸಿಂಹುಲು ನಿರ್ಮಾಪಕರು. ಬುಡ್‍ಬುಡ್ಕೆಯವರ ಕಥೆಯನ್ನಿಟ್ಟುಕೊಂಡು ಥ್ರಿಲ್ಲರ್ ಕಥೆ ಹೇಳಿದ್ದಾರೆ ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ. 

Mugilpete Shooting Pressmeet In Sakleshpura

Odeya Audio Launch Gallery