` ಅಗಲಿದ ಪುಟ್ಟ ಅಭಿಮಾನಿಗೆ ಸುದೀಪ್ ಸಂತಾಪ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
sudeep mourns the death of his young fan
Sudeep, Aditya

ಆತನ ಹೆಸರು ಆದಿತ್ಯ. ಪುಟ್ಟ ಬಾಲಕ. ಹೆಸರಿನಲ್ಲಿ ಸೂರ್ಯನಿದ್ದರೂ ಡಿಎಂಡಿ (ಡ್ಯು ಕೇನ್ ಮುಸಲರ್ ಡಿಸ್ಟ್ರೋಫಿ) ಎಂಬ ಚಿಕಿತ್ಸೆಯಿಲ್ಲದ ಕಾಯಿಲೆ ಆತನಿಗೆ ಜನ್ಮತಃ ಬಂದಿತ್ತು. ಅದು ಮೂಳೆಗಳನ್ನು, ಮಾಂಸಖಂಡಗಳನ್ನು  ದುರ್ಬಲಗೊಳಿಸುತ್ತಾ ಹೋಗುವ ಕಾಯಿಲೆ. ಮೊದಲೇ ಗೊತ್ತಾಗುವುದು ಅಪರೂಪ. ಸಾಮಾನ್ಯವಾಗಿ ಬಾಲಕರಿಗೆ 4 ವರ್ಷದವರಿದ್ದಾಗ ಗೊತ್ತಾಗುತ್ತದಾದರೂ ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತೆ. ಆದಿತ್ಯನಿಗಾಗಿದ್ದುದೂ ಅದೇ. ಹೆತ್ತವರು ಆತನನ್ನು ಬದುಕಿರುವವರೆಗೂ ಚೆನ್ನಾಗಿ ನೋಡಿಕೊಳ್ಳಲು ಪಣ ತೊಟ್ಟಿದ್ದರು.

ಆದಿತ್ಯ ಸುದೀಪ್ ಅಭಿಮಾನಿಯಾಗಿದ್ದ. ಸುದೀಪ್ ಅವರನ್ನು ನೋಡಲು ತವಕಿಸುತ್ತಿದ್ದ. ಮೈಸೂರಿನ ಈ ಹುಡುಗನ ತಂದೆ ಭಾರತಿ ಶಂಕರ್, ಚಿತ್ರರಂಗದವರೇ. ಆಟೋಗ್ರಾಫ್ ಪ್ಲೀಸ್ ಎಂಬ ಚಿತ್ರ ನಿರ್ದೇಶಿಸಿದ್ದವರು. ಮೈಸೂರಿನಲ್ಲಿಯೇ ನೆಲೆಸಿರುವ ಅವರು ಸುದೀಪ್ ಅವರಿಗೆ ವಿಷಯ ತಿಳಿಸಿದ್ದರು. ಮೈಸೂರಿಗೆ ಹೋಗಿ ಆದಿತ್ಯನಿಗೆ ಸಾಂತ್ವನ ಹೇಳಿದ್ದ ಸುದೀಪ್, ನಂತರ ಆದಿತ್ಯ  ನೋಡಲು ಬಯಸಿದ್ದ ಪ್ರವಾಸಿ ತಾಣಗಳಿಗೆ ತಮ್ಮ ಖರ್ಚಿನಲ್ಲೇ ಹೋಗಿ ಬರಲು ವ್ಯವಸ್ಥೆ ಮಾಡಿದ್ದರು. 

ಸತತ ಹೋರಾಟದ ನಂತರ ಆದಿತ್ಯ ಕೊನೆಯುಸಿರೆಳೆದಿದ್ದಾರೆ. ಬಾಲಕನ ನಿಧನಕ್ಕೆ ಸುದೀಪ್ ಕಂಬನಿ ಮಿಡಿದಿದ್ದಾರೆ. ಚಿತ್ರಲೋಕದ ವರದಿಯನ್ನು ನೋಡಿದ ಸುದೀಪ್, ಬಾಲಕನೊಂದಿಗೆ ಕಳೆದಿದ್ದ ಮಧುರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. 

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images