` ರಥಾವರ ನಿರ್ದೇಶಕನ ತಾರಕಾಸುರ.. ಮತ್ತೊಂದು ನಿಗೂಢ ಜಗತ್ತಿನ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rathaavara director's upcoming film is tarakasura
Tarakasura

ರಥಾವರ. ಶ್ರೀಮುರಳಿ-ರಚಿತಾ ರಾಮ್-ರವಿಶಂಕರ್ ಅಭಿನಯದ ಚಿತ್ರ ಸೂಪರ್ ಹಿಟ್ ಆಗಿತ್ತು. ಮಂಗಳಮುಖಿಯರ ನಿಗೂಢ ಜಗತ್ತಿನ ಕಥೆಯನ್ನು ಕಮರ್ಷಿಯಲ್ಲಾಗಿ ಹೇಳಿ ಗೆದ್ದಿದ್ದರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಈ ಬಾರಿ ಅವರು ತಾರಕಾಸುರನಾಗಿ ಬಂದಿದ್ದಾರೆ. ಈ ಬಾರಿ ಅವರು ಹೇಳೋಕೆ ಹೊರಟಿರುವುದು ಬುಡ್‍ಬುಡ್ಕೆಯವರ ಬಗ್ಗೆ. ಬುಡ್‍ಬುಡ್ಕೆಯವರ ಬಗ್ಗೆ ಅಂಥ ನಿಗೂಢ ರಹಸ್ಯ, ಕಥೆ ಏನಿದೆ..? ಅದು ಗೊತ್ತಾಗಬೇಕೆಂದರೆ ಈ ವಾರ ರಿಲೀಸ್ ಆಗಲಿರುವ ತಾರಕಾಸುರ ಚಿತ್ರ ನೋಡಬೇಕು.

ವೈಭವ್-ಮಾನ್ವಿತಾ ಕಾಮತ್ (ಮಾನ್ವಿತಾ ಹರೀಶ್) ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ನರಸಿಂಹುಲು ನಿರ್ಮಾಪಕರು. ಪತ್ರಿಕೆಯೊಂದರಲ್ಲಿ ಬಂದಿದ್ದ ಲೇಖನ ಸಂಶೋಧನೆಗೆ ಪ್ರೇರೇಪಿಸಿತು. ಅಧ್ಯಯನಕ್ಕಿಳಿದಾಗ ಹೊಸ ಕಥೆ ಹೊಳೆಯಿತು. ಅದೇ ತಾರಕಾಸುರ ಎಂದಿದ್ದಾರೆ ಬಂಡಿಯಪ್ಪ. ರಥಾವರನ ಯಶಸ್ಸು, ತಾರಕಾಸುರದಲ್ಲೂ ಮುಂದುವರಿಯಲಿದೆ ಅನ್ನೋದು ಅವರ ನಿರೀಕ್ಷೆ.

Gara Gallery

Rightbanner02_butterfly_inside

Paddehuli Movie Gallery