` ಕಬ್ಬಿನ ಜಲ್ಲೆಯ ಜ್ವಾಲೆಯಲ್ಲಿ ಶ್ರೀಮುರಳಿ ಫೈಟಿಂಗ್ ಭರಾಟೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bharaate fighting scene complete
Bharaate

ರಾಜ್ಯ ಸರ್ಕಾರವನ್ನು ಕಬ್ಬಿನ ಜಲ್ಲೆಯ ಬೆಂಕಿ ಸುಡುತ್ತಿದೆ. ಸಕ್ಕರೆ ರಾಜಕೀಯಕ್ಕೆ ರೈತರು ಕಣ್ಣೀರಿಡುತ್ತಿದ್ದಾರೆ. ಕಬ್ಬು ಬೆಳೆಗಾರರು ಆಕ್ರೋಶಗೊಂಡಿದ್ದಾರೆ. ಈ ನಡುವೆಯೇ ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ 70 ಖಳರೊಂದಿಗೆ ಶ್ರೀಮುರಳಿ ಫೈಟ್ ಮಾಡಿದ್ದಾರೆ. ಹಾಗಂತ.. ರೈತರ ಪ್ರತಿಭಟನೆಗೂ, ಶ್ರೀಮುರಳಿಗೂ ಸಂಬಂಧವೇನಿಲ್ಲ. ಇದು ಭರಾಟೆ ಚಿತ್ರದ ಫೈಟಿಂಗ್ ಸೀನ್ ಚಿತ್ರೀಕರಣ.

ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ 70ಕ್ಕೂ ಹೆಚ್ಚು ಖಳರೊಂದಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಡೆದಾಡಿದ್ದಾರೆ. ಇದೊಂದು ಸಾಹಸ ದೃಶ್ಯದ ಚಿತ್ರೀಕರಣಕ್ಕೇ 60 ಲಕ್ಷ ರೂ. ಖರ್ಚಾಗಿದೆಯಂತೆ. ಬಹದ್ದೂರ್ ಚೇತನ್ ನಿರ್ದೇಶನದ ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶಕ. ಇದರೊಂದಿಗೆ ಭರಾಟೆ 2ನೇ ಹಂತದ ಚಿತ್ರೀಕರಣ ಮುಗಿಸಿದೆ. ಚಿತ್ರವನ್ನು ಏಪ್ರಿಲ್‍ನಲ್ಲಿ ತೆರೆಗೆ ತರುವ ಪ್ಲಾನ್‍ನಲ್ಲಿದೆ ಭರಾಟೆ ಟೀಂ. ಸುಪ್ರೀತ್ ನಿರ್ಮಾಣದ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ.

Adachanege Kshamisi Teaser Launch Gallery

Mataash Movie Gallery