` ಕೆಜಿಎಫ್ ನಾಯಕಿ ಕಥೆಯ ರಹಸ್ಯ ಹೇಳಿಬಿಟ್ರಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srinidhi shetty talks about her role in kgf
Srinidhi Shetty

ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ. ಆಕೆಗಿದು ಮೊದಲ ಸಿನಿಮಾ. ಆದರೆ, ಕೆಜಿಎಫ್ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದರೂ, ಆಕೆ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಅದಕ್ಕೆ ಕಾರಣ ಬೇರೆ ಯಾರೂ ಅಲ್ಲ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್. 

ಕಥೆ, ತಮ್ಮ ಪಾತ್ರದ ಕುರಿತು ಯಾರೊಬ್ಬರೂ ಹೊರಗೆ ಮಾತನಾಡಬಾರದು ಅನ್ನೊದು ಪ್ರಶಾಂತ್ ನೀಲ್, ಯಶ್ ಸೇರಿದಂತೆ ಎಲ್ಲ ಕಲಾವಿದರು, ತಂತ್ರಜ್ಞರಿಗೂ ವಿಧಿಸಿರುವ ಕಟ್ಟಪ್ಪಣೆ. ಅದನ್ನು ಎಲ್ಲರೂ ಶಿರಸಾವಹಿಸಿ ಪಾಲಿಸುತ್ತಿದ್ದಾರೆ ಅನ್ನೋದೂ ಸತ್ಯ. ಇದರ ನಡುವೆ ಶ್ರೀನಿಧಿ ಶೆಟ್ಟಿ ಪಾತ್ರ ಏನು..? ಈ ಕುತೂಹಲವನ್ನು ಮುಂದಿಟ್ಟುಕೊಂಡೇ ಕೇಳಿರೋ ಪ್ರಶ್ನೆ ಇದು.

ಕೆಜಿಎಫ್‍ನಲ್ಲಿ ನಾಯಕಿ ಡಾನ್ ಮಗಳಂತೆ. ಆಕೆಯನ್ನು ಕೊಲ್ಲಲೆಂದೇ ಹೀರೋ ಯಶ್ ಸುಪಾರಿ ತಗೊಂಡು ಕೆಜಿಎಫ್‍ಗೆ ಬರ್ತಾರಂತೆ. ಹೌದಾ ಅಂದ್ರೆ..

ಕಥೆ ಸೂಪರ್ ಆಗಿದೆ ಎಂದು ಗಹಗಹಿಸಿ ನಕ್ಕಿದ್ದಾರೆ ಶ್ರೀನಿಧಿ. ಅಷ್ಟೆಲ್ಲ ಆಗಿ, ನೀವು ಹೇಳ್ತಿರೋ ಕಥೆ ಚಿತ್ರದಲ್ಲಿದೆಯೋ ಇಲ್ವೋ ನಂಗೆ ಗೊತ್ತಿಲ್ಲ. ನಾನೂ ರಿಲೀಸ್‍ಗೆ ಕಾಯ್ತಿದ್ದೇನೆ ಎಂದಿದ್ದಾರೆ.