ಕಿಚ್ಚ ಸುದೀಪ್ ವ್ಯಕ್ತಿತ್ವೇ ಹಾಗೆ.. ಮಾಗಿದೆ. ಪ್ರತಿಯೊಬ್ಬರನ್ನೂ ನಮ್ಮವರು ಎಂದು ಭಾವಿಸುವ ಸುದೀಪ್, ಈ ಬಾರಿ ಅಭಿಮಾನಿಗಳಿಗೆ ಒಂದು ಕಿವಿ ಮಾತು ಹೇಳಿದ್ದಾರೆ. ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಅದು ಆನ್‍ಲೈನ್‍ನಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿತ್ತು.
ಕಿಚ್ಚನನ್ನು ಹೊಗಳುವ ಭರದಲ್ಲಿ ಕೆಲವರು ಬೇರೆ ನಟರನ್ನು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ.. `ಪೈಲ್ವಾನ್ ಚಿತ್ರ ಟ್ರೆಂಡಿಂಗ್‍ನಲ್ಲಿರುವುದು ನಿಮ್ಮ ಬೆಂಬಲದಿಂದ. ಪ್ರೀತಿಯಿಂದ. ಆದರೆ ಅಭಿಮಾನಿಗಳೇ.. ನನ್ನ ಅಭಿಮಾನಿಸುವುದು ಎಂದರೆ, ಇನ್ನೊಬ್ಬರನ್ನು ಹೀಯಾಳಿಸುವುದು.. ಟೀಕಿಸುವುದಲ್ಲ. ಕರ್ನಾಟಕ ಚಿತ್ರರಂಗ ಈಗ ಏರುತ್ತಿರುವ ಎತ್ತರವೇ ಬೇರೆ. ಇಂತಹ ಸಂದರ್ಭದಲ್ಲಿ ಈ ರೀತಿಯ ವರ್ತನೆ ಬೇಡ. ಬೇರೆ ನಟರನ್ನು ಅವಮಾನಿಸಿದರೆ.. ಅದು ನನ್ನನ್ನೇ ಅವಮಾನಿಸಿದಂತೆ'
ಇದು ಅಭಿಮಾನಿಗಳಿಗೆ.. ಅದರಲ್ಲೂ ಅತಿರೇಕಿ ಅಭಿಮಾನಿಗಳಿಗೆ ಸುದೀಪ್ ಮಾಡಿರುವ ಮನವಿ. ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು.