` ಲಕ್ಕಿ ಡಿಸೆಂಬರ್‍ನಲ್ಲಿ ಗೋಲ್ಡನ್ ಸ್ಟಾರ್ ಲಕ್ ಪರೀಕ್ಷೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
golden star ganesh' lucky december
Orange

ಗೋಲ್ಡನ್ ಸ್ಟಾರ್ ಗಣೇಶ್‍ಗೂ, ಡಿಸೆಂಬರ್‍ಗೂ ಅದೃಷ್ಟದ ನಂಟು. ಡಿಸೆಂಬರ್‍ನಲ್ಲಿ ರಿಲೀಸ್ ಆಗಿರುವ ಅವರ ಸಿನಿಮಾಗಳು ಗೆದ್ದಿರುವುದೇ ಹೆಚ್ಚು. ಮುಂಗಾರು ಮಳೆ, ಜೊತೆ ಜೊತೆಯಲಿ, ಚಮಕ್.. ಇದಕ್ಕೆ ಅತ್ಯುತ್ತಮ ಉದಾಹರಣೆ. ಹೀಗಾಗಿಯೇ ಆರೆಂಜ್ ಚಿತ್ರ ಡಿಸೆಂಬರ್‍ಗಾಗಿ ಕಾದು ತೆರೆಗೆ ಬರುತ್ತಿದೆ.

ಜೂಮ್‍ನಲ್ಲಿ ಸಕ್ಸಸ್ ಕಂಡಿದ್ದ ಪ್ರಶಾಂತ್ ರಾಜ್-ಗಣೇಶ್ ಜೋಡಿ, ಆರೆಂಜ್‍ನಲ್ಲಿ ಮತ್ತೊಮ್ಮೆ ಗೆಲುವಿನ ಅದೃಷ್ಟ ಪರೀಕ್ಷೆಗಿಳಿದಿದೆ. ರಾಜಕುಮಾರ ಚಿತ್ರದ ನಾಯಕಿ ಪ್ರಿಯಾ ಆನಂದ್‍ಗೆ ಇದು ಕನ್ನಡದಲ್ಲಿ 2ನೇ ಸಿನಿಮಾ. ಒಂಥರಾ ಲಕ್ಕಿ ಜೋಡಿಗಳ ಸಂಗಮ ಆರೆಂಜ್ ಎನ್ನಬಹುದು. ಡಿಸೆಂಬರ್  7ಕ್ಕೆ ಸಿನಿಮಾ ತೆರೆ ಮೇಲೆ ಬರಲಿದೆ.

Chemistry Of Kariyappa Movie Gallery

BellBottom Movie Gallery