ತಾರಕಾಸುರ. ಅದೇ ಒಬ್ಬ ರಾಕ್ಷಸನ ಹೆಸರು. ಪಾರ್ವತಿಯಿಂದ ಸಂಹಾರವಾದ ಅಸುರನ ಹೆಸರಲ್ಲಿ ಹೀರೋ ಸಿನಿಮಾನಾ..? ಅಂತಹ ಕುತೂಹಲ ಹುಟ್ಟಿಸಿಯೇ ಬರುತ್ತಿದೆ ತಾರಕಾಸುರ ಚಿತ್ರ. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ರಥಾವರ ಎಂಬ ಹಿಟ್ ಸಿನಿಮಾ ಕೊಟ್ಟಿದ್ದ ಬಂಡಿಯಪ್ಪ, ತಮ್ಮ 2ನೇ ಸಿನಿಮಾದಲ್ಲಿ ಹೊಸ ಪ್ರತಿಭೆಗಳನ್ನು ಹುಡುಕಿ ಹೊಚ್ಚಹೊಸ ಸಿನಿಮಾ ತೆಗೆದಿದ್ದಾರೆ. ಅದಕ್ಕಾಗಿ 2 ವರ್ಷಗಳ ಸುದೀರ್ಘ ಅವಧಿ ತೆಗೆದುಕೊಂಡಿರುವ ಸಿನಿಮಾ ಇದು.
ವೈಭವ್ಗೆ ನಾಯಕಿಯಾಗಿ ನಟಿಸಿರುವುದು ಟಗರು ಪುಟ್ಟಿ ಕೆಂಡಸಂಪಿಗೆ ಮಾನ್ವಿತಾ. ಹಾಲಿವುಡ್ ನಟ ಡ್ಯಾನಿ ಸಫಾನಿ ಚಿತ್ರದ ವಿಲನ್. ನಾಯಕನಟ ವೈಭವ್, ನಿರ್ಮಾಪಕ ನರಸಿಂಹಲು ಅವರ ಮಗ. ನಿರ್ಮಾಪಕರ ಮಗ ಎಂಬ ಯಾವ ಮುಲಾಜು ಇಟ್ಟುಕೊಳ್ಳದೇ ಚಿತ್ರದಲ್ಲಿ ದುಡಿಸಿಕೊಂಡಿದ್ದಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ.