ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿ ಮದುವೆಯಾಗಿದ್ದು ಡಿಸೆಂಬರ್ 9ರಂದು. 2 ವರ್ಷಗಳ ಹಿಂದೆ. ಅದೇ ದಿನ.. ಡಿಸೆಂಬರ್ 9ರಂದೇ ಮನೆಗೆ ಪುಟ್ಟ ಕಂದ ಬರಲಿದೆ. ಅದೇ ದಿನ ವೈದ್ಯರು ಡೇಟ್ಸ್ ಕೊಟ್ಟಿದ್ದಾರಂತೆ.
ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ರಾಧಿಕಾ ಪಂಡಿತ್‍ಗೆ ಸಂಭ್ರಮದ ಸೀಮಂತ ಮಾಡಿದ್ದಾರೆ ಮೊಗ್ಗಿನ ಮನಸಿನ ಚೆಲುವ ಯಶ್. ಸೀಮಂತಕ್ಕಾಗಿಯೇ ಅರುಣ್ ಸಾಗರ್ ವಿಶೇಷ ಮಂಟಪ ಕಟ್ಟಿದ್ದರೆ, ಹಸಿರು ಚಪ್ಪರದ ನಡುವೆ ರಾಧಿಕಾ ಪಂಡಿತ್‍ಗೆ ಚಿತ್ರರಂಗದ ಕುಟುಂಬದ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಡಿಸೆಂಬರ್ 9ಕ್ಕೆ ಮದುವೆಯಾಗಿ 2 ವರ್ಷ. ಅದೇ ದಿನ ಪುಟ್ಟ ಕಂದನ ಆಗಮನ.. ಅದಾದ ಕೆಲವೇ ದಿನಗಳಲ್ಲಿ ಯಶ್ ವೃತ್ತಿ ಜೀವನದ ಮೌಂಟ್ ಎವರೆಸ್ಟ್ ಕೆಜಿಎಫ್ ರಿಲೀಸ್. ಡಿಸೆಂಬರ್ ಯಶ್ ಪಾಲಿಗೆ ಅದೃಷ್ಟದ ತಿಂಗಳಾಗಲಿ.