` ಶಿವಣ್ಣ ಬಿಟ್ಟರೆ ಬೇರೆ ಆಯ್ಕೆಗಳೇ ಇರಲಿಲ್ಲ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivanna in kavacha
Kavacha Movie Image

ಕವಚ. ಸುಮಾರು ವರ್ಷಗಳ ನಂತರ ಶಿವಣ್ಣ ನಟಿಸಿರುವ ರೀಮೇಕ್ ಸಿನಿಮಾ. ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್‍ನಲ್ಲಿ ಶಿವರಾಜ್‍ಕುಮಾರ್ ಅಂದನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶಿವರಾಜ್‍ಕುಮಾರ್ ಹುಟ್ಟು ಕುರುಡ. ಆದರೆ ವಾಸನೆ ಮತ್ತು ಶಬ್ಧಗಳನ್ನು ಗ್ರಹಿಸಿಯೇ ಫೈಟ್ ಮಾಡುವಷ್ಟು ಮಾರ್ಷಲ್ ಆಟ್ರ್ಸ್ ಪರಿಣಿತ. ಪುಟ್ಟ ಮಗುವನ್ನು ರಕ್ಷಿಸಲು ಹೋರಾಡುವ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ ಶಿವರಾಜ್‍ಕುಮಾರ್.

ಈ ಸಿನಿಮಾ ಕನ್ನಡದಲ್ಲಿ ಮಾಡಬೇಕು ಎಂದು ನಿರ್ಧರಿಸಿದಾಗ ನಮ್ಮ ಮುಂದೆ 2ನೇ ಆಯ್ಕೆಯೇ ಇರಲಿಲ್ಲ. ಇದ್ದವರು ಶಿವಣ್ಣ ಮಾತ್ರ. ಅವರು ರೀಮೇಕ್ ಮಾಡಲ್ಲ ಎಂದು ಗೊತ್ತಿದ್ದರೂ ಅಪ್ರೋಚ್ ಮಾಡಿದೆವು. ಸಿನಿಮಾ ಇಷ್ಟವಾಗಿ ಶಿವರಾಜ್‍ಕುಮಾರ್ ಕೂಡಾ ತಮ್ಮ ಪ್ರತಿಜ್ಞೆಯನ್ನು ಮುರಿದರು ಎಂದು ನೆನಪಿಸಿಕೊಳ್ತಾರೆ ನಿರ್ದೇಶಕ ವಾಸು.

ವಾಸು ರಾಮ್‍ಗೋಪಾಲ್ ವರ್ಮ ಬಳಿ ಅಸಿಸ್ಟೆಂಟ್ ಆಗಿದ್ದವರು. ಅದರ ಛಾಪು ಚಿತ್ರದ ಟ್ರೇಲರ್‍ಗಳಲ್ಲಿ ಕಾಣಿಸುತ್ತಿದೆ. ಒಪ್ಪಂ ಎಂದರೆ ಅರ್ಥ ಜೊತೆಯಾಗಿ.. ಕನ್ನಡದಲ್ಲಿ ಅದು ಕವಚ ಆಗಿದೆ.

ಸೆಟ್‍ನಲ್ಲಿದ್ದವರು ಏನು ಹೇಳಿಕೊಡ್ತಾರೋ ಅದನ್ನಷ್ಟೇ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್.

Adachanege Kshamisi Teaser Launch Gallery

Mataash Movie Gallery