` ಭಾಷೆಯನ್ನ ಹೃದಯದಲ್ಲಿಟ್ಟುಕೊಂಡ್ರೆ ಕನ್ನಡ ಬೆಳೀತಾ ಹೋಗುತ್ತೆ - ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan talks about kannada rajyotsava
Darshan At Qatar

ಕನ್ನಡವನ್ನ ಉಳಿಸೋಕೆ, ಬೆಳೆಸೋಕೆ ಅದು ಮಾಡೋಣ.. ಇದು ಮಾಡೋಣ.. ಹೀಗೆ ಬೆಳೆಸೋಣ.. ಅಂತಾ ಹೇಳ್ಕೊಳ್ಳೋ ಬದಲಿಗೆ ನಾವು ನಮ್ಮ ಕನ್ನಡವನ್ನ ನಮ್ಮ ಹೃದಯದಲ್ಲಿಟ್ಟುಕೊಳ್ಳೋಣ. ನಾವು ನಮ್ಮ ಕನ್ನಡವನ್ನ ಪ್ರೀತಿಸೋಕೆ ಶುರು ಮಾಡಿದ್ರೆ ಸಾಕು, ಅದು ನಿರಂತರವಾಗಿ ಬೆಳೀತಾ ಹೋಗುತ್ತೆ.

ಕನ್ನಡದ ಬಗ್ಗೆ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ ಮಾತು. ಕತಾರ್‍ನಲ್ಲಿ ನಡೆದ ಕನ್ನಡ ರಾಜ್ಯೋತ್ಸವಕ್ಕೆ ಸೃಜನ್ ಲೋಕೇಶ್ ಅವರೊಂದಿಗೆ ಅತಿಥಿಯಾಗಿ ತೆರಳಿದ್ದ ಚಾಲೆಂಜಿಂಗ್ ಸ್ಟಾರ್, ಕಾರ್ಯಕ್ರಮದಲ್ಲಿ ಮಕ್ಕಳು ಕನ್ನಡದಲ್ಲಿಯೇ ಮಾತನಾಡಿದ್ದನ್ನು ನೋಡಿ, ಕೇಳಿ ಆನಂದಿಸಿದ್ರು. ಅಟ್‍ಲೀಸ್ಟ್.. ಇಲ್ಲಿಯವರಾದ್ರೂ ತಮ್ಮ ಮಕ್ಕಳಿಗೆ ಮನೆಯಲ್ಲಿ ಕನ್ನಡ ಹೇಳಿಕೊಡ್ತಿದ್ದಾರೆ ಎಂದರು. ಆ ಮಾತಿನಲ್ಲಿ ನೂರಾರು ಅರ್ಥ, ಸಂದೇಶವಿತ್ತು.

ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸಿ. ಓದೋಕೆ, ಬರೆಯೋಕೆ ಬರದಿದ್ರೂ ಪರವಾಗಿಲ್ಲ. ಕನ್ನಡ ಮಾತನಾಡೋಕಾದ್ರೂ ಬರಲಿ. ಅದರಿಂದ ಕನ್ನಡ, ಕನ್ನಡ ಭಾಷೆ, ಕನ್ನಡ ಸಿನಿಮಾ ಉಳಿಯುತ್ತೆ ಎಂದರು ದರ್ಶನ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery