` ಕುರುಕ್ಷೇತ್ರ ಬಹುತೇಕ ರೆಡಿ. ಆದರೆ... - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
muniratna talks about kurukshetra
Muniratna, Darshan

ಕುರುಕ್ಷೇತ್ರ ಚಿತ್ರ ಯಾವಾಗ..? ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪ್ರಶ್ನೆ. ಏಕೆಂದರೆ, ಅದು ದರ್ಶನ್‍ಗೆ 50ನೇ ಸಿನಿಮಾ. ಅದು ಇಡೀ ಚಿತ್ರರಂಗದ ಪ್ರಶ್ನೆಯೂ ಹೌದು. ಏಕೆಂದರೆ, ಚಿತ್ರರಂಗದ ಶೇ.75ಕ್ಕೂ ಹೆಚ್ಚು ಕಲಾವಿದರು ನಟಿಸಿರುವ ಸಿನಿಮಾ. ಪಕ್ಕಾ ಡೇಟ್ ಮಾತ್ರ ಇನ್ನೂ ಗೊತ್ತಾಗಿಲ್ಲ. ಆದರೆ, ಈಗ ನಿರ್ಮಾಪಕ ಮುನಿರತ್ನ ಅವರೇ ಕುರುಕ್ಷೇತ್ರ ಚಿತ್ರದ ಹೊಸ ಅಪ್‍ಡೇಟ್ ಕೊಟ್ಟಿದ್ದಾರೆ.

ಚಿತ್ರ ಬಹುತೇಕ ಮುಗಿದಿದೆಯಂತೆ. ರಿಲೀಸ್‍ಗೆ ಮೊದಲು ಮುನಿರತ್ನ ಸಿನಿಮಾ ನೋಡಲಿದ್ದಾರಂತೆ. ಸಿನಿಮಾ ತಮಗೆ ತೃಪ್ತಿ ನೀಡಿದ ಮೇಲೆ ರಿಲೀಸ್ ಡೇಟ್ ಘೋಷಿಸುತ್ತೇನೆ. ಅಲ್ಲಿಯವರೆಗೂ ಕೆಲಸಗಳು ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ ಮುನಿರತ್ನ.

Chemistry Of Kariyappa Movie Gallery

BellBottom Movie Gallery