ವೋ.. ರಿಷಬ್ ಶೆಟ್ಟಿ ಪ್ರೊಡ್ಯೂಸರ್ ಆಗ್ತಿದ್ದಾರಾ..? ಪತ್ನಿ ಪ್ರಗತಿ ಹೆಸರಲ್ಲಿ ಪ್ರೊಡಕ್ಷನ್ ಹೌಸ್, ಬ್ಯಾನರ್ ಮಾಡಿದ್ರಾ..? ಸಿನಿಮಾ ಯಾವುದಂತೆ..? ಅವರೇ ನಿರ್ದೇಶಕರಾ..? ಕಥೆ, ಚಿತ್ರಕಥೆ ಅವರದ್ದೇನಾ..? ಅವರೇ ಹೀರೋನಾ..? ಅಥವಾ ಅವರ ಫ್ರೆಂಡ್ ರಕ್ಷಿತ್ ಶೆಟ್ಟಿನಾ..? ಇಲ್ಲಾ.. ಹೊಸಬರನ್ನ ಹಾಕಿಕೊಳ್ತಿದ್ದಾರಾ..? ಓ ಮೈ ಗಾಡ್.. ಇಷ್ಟೆಲ್ಲ ಪ್ರಶ್ನೆಗಳಾ..? ಹೋಲ್ಡಾನ್.. ಇದು ಸಿನಿಮಾ ಸುದ್ದಿ ಅಲ್ಲ.
ಪ್ರಗತಿ ರಿಷಬ್ ಶೆಟ್ಟಿ & ರಿಷಬ್ ಶೆಟ್ಟಿ ಪ್ರೆಸೆಂಟ್ಸ್ ಪ್ರೊಡಕ್ಷನ್ ನಂ.1 ಅಂತಾ ರಿಷಬ್ ಶೆಟ್ಟಿ ಹೇಳಿರೋದೇನೋ ನಿಜ. ಆದರೆ, ಅದು ಅವರು ತಂದೆಯಾಗ್ತಿರೋ ಬಗ್ಗೆ. ಏಪ್ರಿಲ್‍ನಲ್ಲಿ ಸಪ್ತಪದಿ ತುಳಿದಿದ್ದ ರಿಷಬ್-ಪ್ರಗತಿ ಈಗ ಮುದ್ದಾದ ಮಗುವನ್ನು ಸ್ವಾಗತಿಸೋಕೆ ರೆಡಿಯಾಗಿದ್ದಾರೆ.