ರಶ್ಮಿಕಾ ಮಂದಣ್ಣ. ಸ್ಯಾಂಡಲ್‍ವುಡ್‍ನಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬೇಡಿಕೆಯಲ್ಲಿರುವ ನಟಿಯಲ್ಲಿರಲ್ಲಿ ಒಬ್ಬರು. ಅವರೀಗ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ. ಆ ಚಿತ್ರಕ್ಕೆ ಅವರು ಪಡೆದಿರುವ ಸಂಭಾವನೆಯೇ ಭರ್ಜರಿ ಸದ್ದು ಮಾಡುತ್ತಿದೆ.
ಒಂದು ಮೂಲದ ಪ್ರಕಾರ, ರಶ್ಮಿಕಾ ಪಡೆದಿರುವ ಸಂಭಾವನೆ 64 ಲಕ್ಷ. ಇದುವರೆಗೆ ಕನ್ನಡದ ಯಾವುದೇ ನಟಿ ಇಷ್ಟು ಸಂಭಾವನೆ ಪಡೆದಿಲ್ಲ ಎನ್ನಲಾಗುತ್ತಿದೆ. ನಿರ್ಮಾಪಕ ಗಂಗಾಧರ್ ಆಗಲೀ, ನಿರ್ದೇಶಕ ನಂದಕಿಶೋರ್ ಆಗಲೀ.. ಈ ಬಗ್ಗೆ ನೋ ಕಮೆಂಟ್ಸ್.
ಇನ್ನೊಂದು ಮೂಲದ ಪ್ರಕಾರ ಇದು ಭಾರಿ ಮೊತ್ತವೇನೂ ಅಲ್ಲ. ತೆಲುಗು, ತಮಿಳಿನಲ್ಲಿ ಇದಕ್ಕಿಂತಲೂ ಒಳ್ಳೆಯ ಸಂಭಾವನೆ ಇದೆ. ಅದು ಕೋಟಿ ದಾಟಿದೆ. ಕನ್ನಡದಲ್ಲಿ ರಶ್ಮಿಕಾ ಅವರೇ ತಮ್ಮ ಸಂಭಾವನೆ ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.
ದುಡ್ಡಿನ ವಿಷ್ಯ. ಕೇಳಿದ್ರೆ ಎಲ್ಲರೂ ಶ್‍ಶ್‍ಶ್‍ಶ್‍ಶ್‍ಶ್ ಅಂತಾರೆ.