` ಅಣ್ಣಾವ್ರನ್ನು ನೆನಪಿಸಿಕೊಂಡು ಬಂತು ಜಾವಾ ಬೈಕ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
jawa bikes makes its come back
awa Bikes makes a come back

ಜಾವಾ ಮೋಟರ್ ಸೈಕಲ್. ಇದು ಒಂದು ರೀತಿಯಲ್ಲಿ ಬೈಕ್‍ಗಳ ಲೋಕದ ರಾಜ, ಚಕ್ರವರ್ತಿಯೆಂದರೂ ತಪ್ಪಿಲ್ಲ. ಇಂತಹ ಜಾವಾ ಬೈಕ್ ದಶಕಗಳ ನಂತರ ಮಾರುಕಟ್ಟೆಗೆ ಬಂದಿದೆ. ಅದೂ ತನ್ನ ಓಲ್ಡ್ ಸ್ಟೈಲ್‍ನಲ್ಲಿ. ಜಾವಾ ಬೈಕುಗಳು ಇನ್ನೂ ರಸ್ತೆಗಿಳಿದಿಲ್ಲವಾದರೂ ಅದರ ಕ್ರೇಜೇ ಬೇರೆ. ಆದರೆ, ವಿಷಯ ಇದಲ್ಲ. 

ಜಗದ್ವಿಖ್ಯಾತ ಮೋಟರ್ ಸೈಕಲ್ ಕಂಪೆನಿ, ತನ್ನ ಪ್ರತಿಷ್ಟಿತ ಬೈಕ್‍ನ್ನು ಮಾರುಕಟ್ಟೆಗೆ ಬಿಡುವಾಗ ಅಣ್ಣಾವ್ರನ್ನು ನೆನಪಿಸಿಕೊಂಡಿರೋದು. ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಡಾ.ರಾಜ್ ಬೈಕ್ ರೇಸರ್ ಪಾತ್ರ ಮಾಡಿದ್ದಾರೆ. ಅವರು ಚಿತ್ರದಲ್ಲಿ ಬಳಸೋದು ಜಾವಾ ಬೈಕ್‍ನ್ನ. ಚಿತ್ರದ ಕ್ಲೈಮಾಕ್ಸ್ ಅಂತೂ ಅದೇ ಜಾವಾ ಬೈಕ್ ಮೇಲೆ ಅದ್ಭುತವಾಗಿ ಮೂಡಿಬಂದಿದೆ. ಆ ನಾ ನಿನ್ನ ಮರೆಯಲಾರೆ ವಿಡಿಯೋವನ್ನೇ ಟ್ವೀಟ್ ಮಾಡುವ ಮೂಲಕ ಜಾವಾ ಮತ್ತೆ ಬರುತ್ತಿರುವುದನ್ನು ಜಗತ್ತಿಗೆ ಸಾರಿದೆ.

Adachanege Kshamisi Teaser Launch Gallery

Mataash Movie Gallery