` ನಿಖಿಲ್ ಕುಮಾರಸ್ವಾಮಿ ರಾಜ.. ರಾಣಿ ರಚಿತಾ..  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
seetharama kalyana raja rani song
Raja Rani song from Seetharama Kalyana

ನಿನ್ನ ರಾಜ ನಾನು.. ನನ್ನ ರಾಣಿ ನೀನು.. ಹಾಡು ರಿಲೀಸ್ ಆಗಿದೆ. ಇದು ಸೀತಾರಾಮ ಕಲ್ಯಾಣದ ಹಾಡು. ಹಾಡು ಇರುವುದೇ ರಚಿತಾ ರಾಮ್ ಮೇಲೆ. ಗುಳಿಕೆನ್ನೆ ಚೆಲುವೆಯನ್ನು ಹಾಡಿನಲ್ಲಿ ಮನಮೋಹಿನಿ, ಹಟ್ಟಿ ಚಿನ್ನದ ಗಣಿ, ಮುದ್ದು ಗಿಣಿ, ಕಾಳಿದಾಸನ ಕಾವ್ಯ ಎಂದೆಲ್ಲ ಬಣ್ಣಿಸಲಾಗಿದೆ.

ಪ್ರೇಮ ನಿವೇದನೆಯ ಹಾಡು, ಹಾಡಿನ ವಿಡಿಯೋದಲ್ಲಿ ಬಳಸಿರುವ ಫೋಟೋಗಳಲ್ಲಿ ನಿಖಿಲ್-ರಚಿತಾ ಕೆಮಿಸ್ಟ್ರಿ ಶೃಂಗಾರ ಕಾವ್ಯದಂತಿದೆ. ನಿರ್ದೇಶಕ ಹರ್ಷ, ಲಿರಿಕಲ್ ಹಾಡನ್ನೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ಸುಕನ್ಯ ಸಾಹಿತ್ಯ ಬರೆದಿರುವ ಹಾಡಿಗೆ ಅನೂಪ್ ರೂಬಿನ್ಸ್ ಸಂಗೀತ ಸಂಯೋಜಿಸಿದ್ದು, ಅರ್ಮಾನ್ ಮಲ್ಲಿಕ್ ಹಾಡು ಹಾಡಿದ್ದಾರೆ. ಲಿರಿಕಲ್ ವಿಡಿಯೋ ಸಾಂಗ್‍ನ್ನು ರಿಲೀಸ್ ಮಾಡಿರುವುದು ಸಿಎಂ ಕುಮಾರಸ್ವಾಮಿ. 

Chemistry Of Kariyappa Movie Gallery

BellBottom Movie Gallery