Print 
dayal padmanabhan naveen krishna puta 109,

User Rating: 5 / 5

Star activeStar activeStar activeStar activeStar active
 
dayal's puta 109 rocks again
Puta 109

ನಿರ್ದೇಶಕ ದಯಾಳ್ ಪದ್ಮನಾಭನ್‍ಗೆ ಪ್ರಯೋಗಾತ್ಮಕ, ವಿಭಿನ್ನ ಚಿತ್ರಗಳ ಭರ್ಜರಿ ಹಿಡಿತ ಸಿಕ್ಕಿಬಿಟ್ಟಿದೆ. ಆ್ಯಕ್ಟರ್ ಚಿತ್ರದಿಂದ ಶುರುವಾದ ವಿಭಿನ್ನ ಕಥೆಗಳನ್ನು ಹೇಳುವ ದಯಾಳ್ ಸೂತ್ರ, ಹಗ್ಗದ ಕೊನೆ, ಆ ಕರಾಳ ರಾತ್ರಿಯಲ್ಲೂ ಮುಂದುವರೆದಿತ್ತು. ಈಗ ಪುಟ 109ರಲ್ಲೂ ದಯಾಳ್ ಆ ವಿಷಯದಲ್ಲಿ ಗೆದ್ದಿದ್ದಾರೆ. ಚಿತ್ರವನ್ನು ನೋಡಿದವರು ಮತ್ತೊಮ್ಮೆ ಥ್ರಿಲ್ಲಾಗಿದ್ದಾರೆ.

ಇದು ಅನ್‍ಯೂಷುಯಲ್ ಕ್ರೈಂ ಥ್ರಿಲ್ಲರ್. ಪ್ರಯೋಗಾತ್ಮಕ ಚಿತ್ರವೂ ಅಲ್ಲ, ಅತ್ತ ಕಮರ್ಷಿಯಲ್ ಚಿತ್ರವೂ ಅಲ್ಲ. ಬ್ರಿಡ್ಜ್ ಸಿನಿಮಾ ಎನ್ನುತ್ತಾರೆ ದಯಾಳ್. ಆರ್. ಅರವಿಂದ್ ಎಂಬುವವರು ಬರೆದ ಕಥೆಗೆ ಸಂಭಾಷಣೆ ಬರೆದಿರುವುದು ನವೀನ್ ಕೃಷ್ಣ. ಆ ಕರಾಳ ರಾತ್ರಿಯಲ್ಲಿ ಅಚ್ಚರಿ ಮೂಡಿಸಿದ್ದ ಜಿಕೆ, ಈ ಚಿತ್ರದಲ್ಲಿ ಇನ್ನೂ ಎತ್ತರಕ್ಕೇರಿದ್ದಾರೆ. ಜಿಕೆ ಮತ್ತು ನವೀನ್ ಕೃಷ್ಣ ನಡುವಣ ಜುಗಲ್‍ಬಂದಿ ಪ್ರೇಕ್ಷಕರನ್ನು ಥ್ರಿಲ್ಲಾಗಿಸಲಿದೆ ಎಂದಿದ್ದಾರೆ ದಯಾಳ್.

ಸಿನಿಮಾದ ಹೈಲೈಟ್ ಏನ್ ಗೊತ್ತಾ..? 70 ನಿಮಿಷಗಳ ಒಂದೇ ದೃಶ್ಯ. ಆದರೆ ಒಂದು ಕ್ಷಣವೂ ಬೋರ್ ಆಗಲ್ಲ. ಪ್ರೇಕ್ಷಕ ಸೀಟಿನ ತುತ್ತತುದಿಯಲ್ಲಿ ಕುಳಿತು ಥ್ರಿಲ್ ಅನುಭವಿಸ್ತಾನೆ ಅನ್ನೋದು ದಯಾಳ್ ಭರವಸೆ. 

ಚಿತ್ರದ ನಾಯಕಿ ವೈಷ್ಣವಿ ಮೆನನ್, ಈ ಚಿತ್ರದಲ್ಲಿ ಮಾರ್ಡನ್ ಹೆಂಡತಿಯಾಗಿ ಮಿಂಚಿದ್ದಾರೆ. ಅಂದಹಾಗೆ ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ಅವರು ಕೊಲೆಯಾಗಿ ಹೋಗ್ತಾರೆ. ಥ್ರಿಲ್ ಶುರುವಾಗುವುದೇ ಆಗ. ಪುಟ 109 ಥಿಯೇಟರುಗಳಲ್ಲಿದೆ.