ರಶ್ಮಿಕಾ ಮಂದಣ್ಣ ಸದ್ಯಕ್ಕೆ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಪುನೀತ್ ರಾಜ್‍ಕುಮಾರ್, ಗಣೇಶ್ ಜೊತೆ ಹಿಟ್ ಸಿನಿಮಾ ನೀಡಿರುವ ರಶ್ಮಿಕಾ, ದರ್ಶನ್ ಮತ್ತು ಧ್ರುವ ಸರ್ಜಾ ಜೊತೆ ನಟಿಸುತ್ತಿದ್ದಾರೆ. ಅತ್ತ ತೆಲುಗಿನಲ್ಲಿ ವಿಜಯ್ ದೇವರಕೊಂಡ, ಅಲ್ಲು ಸುರೇಶ್, ನಾನಿ ಜೊತೆ ಹಿಟ್ ನೀಡಿದ್ದಾರೆ. ಈಗ ತಮಿಳಿಗೂ ಹಾರುತ್ತಿದ್ದಾರೆ.
ತಮಿಳಿನಲ್ಲಿ ವಿಜಯ್ ಅಭಿನಯದ ಹೊಸ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಅನ್ನೋ ಸುದ್ದಿ ಜೋರಾಗಿದೆ. ಇನ್ನೂ ಕನ್‍ಫರ್ಮ್ ಆಗಿಲ್ಲ ಎನ್ನುತ್ತಿದ್ದಾರೆ ರಶ್ಮಿಕಾ. ಅದು ವಿಜಯ್ ಮತ್ತು ನಿರ್ದೇಶಕ ಅಟ್ಲೀಕುಮಾರ್ ಕಾಂಬಿನೇಷನ್‍ನ ಸಿನಿಮಾ. ಥೆರಿ ಮತ್ತು ಮರ್ಸೆಲ್ ಎಂಬ ಎರಡು ಹಿಟ್ ನೀಡಿರುವ ಜೋಡಿ, 3ನೇ ಬಾರಿಗೆ ಒಂದಾಗುತ್ತಿದೆ. ಆ ಸಿನಿಮಾಗೆ ರಶ್ಮಿಕಾ ನಾಯಕಿ ಎನ್ನಲಾಗಿದ್ದು, ಮಾತುಕತೆಗಳು ಫೈನಲ್ ಹಂತದಲ್ಲಿವೆ.