` ಬಂಗಾರದ ಮನುಷ್ಯನಿಗೆ ಬಂಗಾರದ ಲೋಟ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mtr remembers golden coffee moments with dr raj
Dr Rajkumar, Parvathamm at MTR

ಡಾ.ರಾಜ್‍ಕುಮಾರ್.. ಕನ್ನಡ ಚಿತ್ರರಸಿಕರ ಎದೆಯಲ್ಲಿ ಬಂಗಾರದ ಮನುಷ್ಯ. ಅಂತಹ ಬಂಗಾರದ ಮನುಷ್ಯನಿಗೆ ಬಂಗಾರದ ಲೋಟದಲ್ಲೇ ಕಾಫಿ ಕೊಟ್ಟು ಧನ್ಯತೆ ಅನುಭವಿಸಿದ್ದು ಎಂಟಿಆರ್. ಬೆಂಗಳೂರಿನ ಎಂಟಿಆರ್ ಹೋಟೆಲ್ ಆಗಿನ ಕಾಲಕ್ಕೆ ಬಹಳ ಫೇಮಸ್.

ಆ ಹೋಟೆಲ್‍ನಲ್ಲಿ ವಿಐಪಿಗಳಿಗೆ ಬೆಳ್ಳಿ ಲೋಟದಲ್ಲಿ ಕಾಫಿ ಕೊಡುವ ಪದ್ಧತಿ ಇತ್ತು. ಅದ್ಭುತ ಪ್ರತಿಕ್ರಿಯೆಯೂ ಸಿಕ್ಕಿತ್ತು. ಹೀಗಿರುವಾಗಲೇ ಎಂಟಿಆರ್ ಮಾಲೀಕ ಸದಾನಂದ ಮಯ್ಯರಿಗೆ ವಿವಿಐಪಿಗಳಿಗೆ ಚಿನ್ನದ ಲೋಟದಲ್ಲಿ ಕಾಫಿ ಕೊಡುವ ಐಡಿಯಾ ಬಂತು. ಅದನ್ನು ಅಣ್ಣಾವ್ರಿಂದಲೇ ಶುರು ಮಾಡಿದರೆ ಹೇಗೆ ಎಂದು ಆಹ್ವಾನಿಸಿಯೇಬಿಟ್ಟರು.

ಎಂಟಿಆರ್‍ಗೆ ಸಾಕಷ್ಟು ಸಲ ಹೋಗಿದ್ದೀನಿ. ತಿಂಡಿ ಭಾಳ ಚೆನ್ನಾಗಿರುತ್ತೆ. ಇದೇ ನೆಪದಲ್ಲಿ ಹೋಗಿ ಬಾರಿಸೋಣ ಬಿಡಿ ಎಂದರು ರಾಜ್. 

ಪಾರ್ವತಮ್ಮ ರಾಜ್‍ಕುಮಾರ್ ಅವರೊಂದಿಗೆ ಎಂಟಿಆರ್‍ಗೆ ಹೋದರು. ಚಿನ್ನದ ಲೋಟದಲ್ಲಿ ಕಾಫಿ ಕುಡಿದು, ಜಾಮೂನು ತಿಂದು.. ತಿಂಡಿಯನ್ನು  ಬಾರಿಸಿದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery