Print 
ajay rao sumalatha ambareesh, ashika ranganath thayige thakka maga,

User Rating: 0 / 5

Star inactiveStar inactiveStar inactiveStar inactiveStar inactive
 
ajai rao talks about his relationship with his mother
Ajai Rao

ತಾಯಿಗೆ ತಕ್ಕ ಮಗ.. ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಮೋಹನ್ ದಾಸ್ ಎಂಬ ಫೈರ್‍ಬ್ರಾಂಡ್ ಪಾತ್ರದಲ್ಲಿ ಮಿಂಚಿರುವುದು ಅಜಯ್ ರಾವ್. ತಾಯಿಯಾಗಿ ನಟಿಸಿರುವುದು ಎಕ್ಸ್‍ಕ್ಯೂಸ್ ಮಿಯಲ್ಲಿ ಅಮ್ಮನಾಗಿದ್ದ ಸುಮಲತಾ ಅಂಬರೀಷ್. ಮೊದಲ ಚಿತ್ರದಲ್ಲಿ ತಾಯಿಯಾಗಿದ್ದ ಸುಮಲತಾ, 25ನೇ ಚಿತ್ರಕ್ಕೆ ಮತ್ತೊಮ್ಮೆ ಅಮ್ಮನ ಪಾತ್ರದಲ್ಲಿ ನಟಿಸಿರುವುದು ಅಜಯ್ ರಾವ್ ಖುಷಿಗೆ ಕಾರಣ.

ಇದೆಲ್ಲದರ ಜೊತೆಗೆ ಈ ಹೆಸರು ಕೇಳಿದ ಮೇಲೆ ಅಜಯ್ ರಾವ್ ತಮ್ಮ ತಾಯಿಯ ಜೊತೆ ಹೇಗಿರ್ತಾರೆ ಅನ್ನೋ ಕುತೂಹಲ ಮೂಡೋದು ಸಹಜ. `ನಾನು ನನ್ನ ಅಮ್ಮನ ಜೊತೆ ತುಂಬಾ ಫ್ರೆಂಡ್ಲಿಯಾಗಿರುತ್ತೇನೆ. ತಮಾಷೆ ಮಾಡಿಕೊಂಡಿರುತ್ತೇನೆ. ನಿರ್ದೇಶಕ ಶಶಾಂಕ್, ಕೆಲವೊಂದು ದೃಶ್ಯಗಳಿಗೆ ನನ್ನ ಮತ್ತು ನನ್ನ ಅಮ್ಮನ ಜೊತೆ ಒಡನಾಟದ ಕೆಲವು ಅಂಶಗಳನ್ನು ಮಿಕ್ಸ್ ಮಾಡಿದ್ದಾರೆ'' ಎಂದಿದ್ದಾರೆ ಅಜಯ್ ರಾವ್.

ಅಜಯ್ ರಾವ್ ಅವರ ತಾಯಿ ಸಿನಿಮಾವನ್ನು ನೋಡಿ ತುಂಬಾ ಭಾವುಕರಾಗಿದ್ದರಂತೆ. ಸಿನಿಮಾ ನೋಡಿದ ಮೇಲೆ ಕೆಲವು ಗಂಟೆಗಳ ಯಾರೊಂದಿಗೂ ಮಾತನಾಡದೆ ಮೌನವಾಗಿ ಕುಳಿತುಬಿಟ್ಟಿದ್ದರಂತೆ. ಅಷ್ಟರಮಟ್ಟಿಗೆ ಸಿನಿಮಾ ಭಾವನಾತ್ಮಕವಾಗಿ ಮೂಡಿ ಬಂದಿದೆ.

ಸೆಂಟಿಮೆಂಟ್ ಮತ್ತು ಕಮರ್ಷಿಯಲ್ ಎರಡೂ ಜಾನರ್‍ಗಳಲ್ಲಿ ಸಕ್ಸಸ್ ಕಂಡಿರುವ ನಿರ್ದೇಶಕ ಶಶಾಂಕ್ ಅವರ ಬ್ಯಾನರ್‍ನ ಮೊದಲ ಸಿನಿಮಾ ಇದು. ಅಜಯ್ ರಾವ್ ಜೊತೆ ಶಶಾಂಕ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರೆ, ಅಶಿಕಾ ರಂಗನಾಥ್ ಮತ್ತೊಂದು ಗೆಲುವಿನ ಕನಸಿನಲ್ಲಿದ್ದಾರೆ.