ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದರೆ, ಚಿತ್ರದ ಟ್ರೇಲರ್‍ಗೆ ಸಿಗುತ್ತಿರುವ ರಿಯಾಕ್ಷನ್ ನೋಡಿ ಸಂಭ್ರಮಿಸುತ್ತಿದೆ ಹೊಂಬಾಳೆ ಫಿಲಂಸ್. ನಿರ್ದೇಶಕ ಪ್ರಶಾಂತ್ ನೀಲ್‍ರ ಶ್ರಮ ಇಡೀ ಟ್ರೇಲರ್‍ನಲ್ಲಿ ಎದ್ದುಕಂಡಿದೆ. ಟ್ರೇಲರ್ ಹಿಟ್ ಆಗುತ್ತಿದ್ದಂತೆಯೇ ಎಲ್ಲರಿಗಿಂತ ಮೊದಲು ಡಿಮ್ಯಾಂಡ್ ಸೃಷ್ಟಿಯಾಗಿರುವುದು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಛಾಯಾಗ್ರಾಹಕ ಭುವನ್‍ಗೆ.
ಚಿನ್ನದ ಗಣಿಯ ದೂಳು, ಕಣ್ಣ ಭಾವನೆಯ ನೆರಳುಗಳನ್ನು ಹೃದಯ ಮುಟ್ಟುವಂತೆ ಚಿತ್ರೀಕರಿಸಿರುವ ಭುವನ್‍ಗೆ ಈಗ ಬಾಲಿವುಡ್ ಸೇರಿದಂತೆ ಪರಭಾಷೆ ಚಿತ್ರಗಳ ನಿರ್ದೇಶಕರು, ನಿರ್ಮಾಪಕರಿಂದ ಕರೆ ಬರುತ್ತಿವೆ.
ಅತ್ತ, ಇದೇ ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಟ್ಟಿರುವ ನಾಯಕಿ ಶ್ರೀನಿಧಿ ಶೆಟ್ಟಿಗೂ ಬಾಲಿವುಡ್ ಬ್ಯಾನರ್‍ಗಳಿಂದ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲವಾದರೂ, ಅವಕಾಶಗಳ ಸುರಿಮಳೆಯಂತೂ ಆಗುತ್ತಿದೆ.
ಡಿಸೆಂಬರ್ 21ಕ್ಕೆ ತೆರೆಗೆ ಬರಲಿರುವ ಕೆಜಿಎಫ್‍ನ ಕ್ರೇಝ್ ನೋಡುತ್ತಿದ್ದರೆ, ಶಾರೂಕ್ ಖಾನ್‍ರ ಝೀರೋ ಶೇಕ್ ಆದರೂ ಅಚ್ಚರಿಯಿಲ್ಲ.