` ಮಳೆಯಲ್ಲಿ ತಪ್ಪಿಸಿಕೊಂಡರೂ.. ತಾಯಿಗೆ ತಕ್ಕ ಸೊಸೆಯಾದ ಅಶಿಕಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ashika ranganath looks glamorous
Thayige Thakka Maga

ಏನ್ರೀ ಇದು..  ಯಾರಾದ್ರೂ ತಾಯಿಗೆ ಸೊಸೆಯಾಗೋಕೆ ಸಾಧ್ಯನಾ..? ಎಂದು ಪ್ರಶ್ನಿಸಬೇಡಿ. ಇದು ತಾಯಿಗೆ ತಕ್ಕ ಮಗ ಚಿತ್ರದ ನಾಯಕಿ ಅಶಿಕಾ ರಂಗನಾಥ್ ಸ್ಟೋರಿ. ಅಶಿಕಾ ರಂಗನಾಥ್ ಈಗ ಚುಟು ಚುಟು ಹುಡುಗಿ, ಮುಗುಳುನಗೆ ಚೆಲುವೆ ಎಂದೆಲ್ಲ ಫೇಮಸ್ ಎನ್ನುವುದು ನಿಜ. ಆದರೆ ಈ ಹುಡುಗಿ ಮೊದಲು ಬಣ್ಣ ಹಚ್ಚಬೇಕಿದ್ದುದು ಇದೇ ಶಶಾಂಕ್ ಅವರ ಮುಂಗಾರು ಮಳೆ-2 ನಲ್ಲಿ. ಆಗ ಮಿಸ್ಸಾದ ಚಾನ್ಸ್ ಈಗ ಸಿಕ್ಕಿದೆ. 

ತಾಯಿಗೆ ತಕ್ಕ ಮಗ ಚಿತ್ರದ ನಾಯಕಿ ಅಶಿಕಾ. ಅಜಯ್ ರಾವ್ ಮತ್ತು ಸುಮಲತಾ ಅನ್ಯಾಯದ ವಿರುದ್ಧ ಸಿಡಿದೇಳುವವರು. ಅದಕ್ಕೆ ತದ್ವಿರುದ್ಧ ಅಶಿಕಾ. ತಾನಾಯ್ತು.. ತನ್ನ ಕೆಲಸವಾಯ್ತು.. ನಮಗ್ಯಾಕೆ ಬೇಕು ಊರವರ ಉಸಾಬರಿ ಎಂದುಕೊಂಡು ಇರುವ ಹುಡುಗಿ. ವೀಣಾವಾದಕಿ. ಹೀಗೆ.. ತದ್ವಿರುದ್ಧ ಪಾತ್ರಗಳ ಕಥೆ ಹೇಳುತ್ತಿರುವ ಶಶಾಂಕ್, ಹಾಡೊಂದರಲ್ಲಿ ಅಜಯ್ ರಾವ್ ಮತ್ತು ಅಶಿಕಾರನ್ನು ಗ್ಲಾಮರಸ್ ಆಗಿ ತೋರಿಸಿದ್ದಾರೆ.

ಇದೊಂದು ಮೆಚ್ಯೂರ್ಡ್ ಲವ್ ಸ್ಟೋರಿ. ನನ್ನ ಪಾತ್ರಕ್ಕೆ ಚಿತ್ರದಲ್ಲಿ ಪ್ರಾಮುಖ್ಯತೆ ಇದೆ. ಅದೇ ನನಗೆ ಖುಷಿ. ಅಪ್ಪನ ಮಾತನ್ನು ಮೀರದ ಸಂಪ್ರದಾಯಸ್ಥ ಹುಡುಗಿಯ ಪಾತ್ರ ನನ್ನದು ಎಂದು ಹೇಳಿಕೊಂಡಿದ್ದಾರೆ ಅಶಿಕಾ ರಂಗನಾಥ್.

Geetha Movie Gallery

Adhyaksha In America Audio Release Images