ಕೆಜಿಎಫ್ ಚಿತ್ರದ ಮೇಕಿಂಗ್, ದೃಶ್ಯ ವೈಭವಕ್ಕೆ ಪೈಪೋಟಿ ನೀಡಿರುವ ಡೈಲಾಗುಗಳಂತೂ ಅದ್ಭುತ. ಟ್ರೇಲರ್ನಲ್ಲಿ ಖಡಕ್ ಅನ್ನಿಸೋದು ಎರಡೇ ಡೈಲಾಗು. ಉಳಿದಂತೆ ಭಾವನೆಗಳನ್ನು ಕೆರಳಿಸುವ, ಉದ್ದೀಪಿಸುವ ಮಾತುಗಳಿವೆ. ಟ್ರೇಲರ್ ಆರಂಭ : ಆ ರಾತ್ರಿ ಎರಡು ಘಟನೆ ನಡೀತು. ಆ ಜಾಗಾನೂ ಹುಟ್ತು. ಅವನೂ ಹುಟ್ಟಿದ..
ಡೈಲಾಗ್ ನಂ. 1 - ಮುಂಬೈ ಏನು ನಿಮ್ಮಪ್ಪಂದಾ..?
ಅಲ್ಲ ಕಣೋ.. ನಿಮ್ಮಪ್ಪಂದೇ.. ನಿಮ್ಮಪ್ಪ ನಾನೇ..
ಡೈಲಾಗ್ ನಂ. 2 - ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ನೀನು ಬರೀ ಒಂದು ಯುದ್ಧ ಗೆಲ್ಲಬಹುದು.
ಅದೇ ನೀನು ಮುಂದೆ ನಿಂತಿದ್ದೀಯ ಅನ್ನೋ ಧೈರ್ಯ ನಿನ್ನ ಹಿಂದೆ ಇರೋ ಸಾವಿರ ಜನಕ್ಕೆ ಬಂದ್ರೆ, ನೀನು ಪ್ರಪಂಚನೇ ಗೆಲ್ಲಬಹುದು.
ಡೈಲಾಗ್ ನಂ. 3 - ರೌಡಿ : ಏನೋ ಬೇಕು ನಿಂಗೆ..? ಮಾಸ್ಟರ್ ಯಶ್ ಡೈಲಾಗ್ : ದುನಿಯಾ
ಟ್ರೇಲರ್ ಇಂಟರ್ವಲ್ - ನೀನು ಒಂದು ಆನೆ ಹೊಡೀಬೇಕು ಅಂತಾ ಹೇಳ್ತಾನೆ ಡಾನ್. ಯಶ್ ಜರ್ನಿ ಶುರು. ಹೊರಟ.. ಅವನಿಗೆ ಹೋಗೋ ದಾರಿನೂ ಗೊತ್ತಿರ್ಲಿಲ್ಲ. ತಲುಪೋ ಜಾಗದ ಬಗ್ಗೆ ಗೊತ್ತಿರಲಿಲ್ಲ. ಅಲ್ಲಿನ ಅಮಾನುಷತೆಯೂ ಗೊತ್ತಿರಲಿಲ್ಲ.
ಹೀಗೆ ಶುರುವಾಗುವ ಟ್ರೇಲರ್ನಲ್ಲಿ ಸಣ್ಣ ಸಣ್ಣ ಸೌಂಡು ಕೂಡಾ ಎದ್ದು ಕಾಣುತ್ತೆ. ಕಿವಿಗೆ ನಾಟುತ್ತೆ. ಪ್ರಶಾಂತ್ ನೀಲ್ ಮತ್ತೊಮ್ಮೆ ಉಗ್ರಂ ನೆನಪಿಸುತ್ತಾರೆ.