ಕೆಜಿಎಪ್ ಟ್ರೇಲರ್ ರಿಲೀಸ್ ಆಯ್ತು. ನಿರೀಕ್ಷೆಯಂತೆಯೇ ಚಿತ್ರದಲ್ಲಿರೊದು ಕೋಲಾರ ಚಿನ್ನದ ಗಣಿಯ ಕಥೆ. 1951ರಿಂದ ಚಿತ್ರದ ಕಥೆ ಶುರುವಾಗುತ್ತೆ. ಆದರೆ, ಚಿತ್ರ ಆರಂಭವಾಗೋದು ಮುಂಬೈನಿಂದ ಅನ್ನೋ ಸುಳಿವು ಕೊಟ್ಟಿದೆ ಚಿತ್ರದ ಟ್ರೇಲರ್. 80ರ ದಶಕವನ್ನು ಪ್ರಶಾಂತ್ ಮತ್ತೊಮ್ಮೆ ಮರುಸೃಷ್ಟಿಸಿದ್ದಾರೆ. ಉಗ್ರಂನಲ್ಲಿ ವಿಭಿನ್ನ ಡೈಲಾಗ್ಗಳ ಹೊಳೆ ಹರಿಸಿದ್ದ ಪ್ರಶಾಂತ್, ಈ ಟ್ರೇಲರ್ನಲ್ಲೂ ಡೈಲಾಗ್ ಹವಾ ಇದೆ ಅನ್ನೊ ಸುಳಿವು ಕೊಟ್ಟಿದ್ದಾರೆ. ಮೇಕಿಂಗ್ ಅಂತೂ ಹಾಲಿವುಡ್ ಚಿತ್ರಗಳನ್ನೂ ನಾಚಿಸುವಂತಿದೆ.
ಅನಂತ್ನಾಗ್ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗುವ ಟ್ರೇಲರ್, ಕೆಲವೇ ಕ್ಷಣಗಳಲ್ಲಿ ಮನಸ್ಸು ಆವರಿಸಿಕೊಳ್ಳುತ್ತಿದೆ. ರವಿ ಬಸ್ರೂರು ಸಂಗೀತ ಕಿವಿಗಳಲ್ಲಿ ಗುಂಯ್ಗುಟ್ಟುತ್ತೆ. ಯಶ್ ಸಣ್ಣ ಸಣ್ಣ ಮೂವ್ಮೆಂಟ್ನಲ್ಲಿಯೇ ಆವರಿಸಿಕೊಂಡುಬಿಡ್ತಾರೆ. ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕ, ವಸಿಷ್ಟ ಹೀಗೆ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ತಮನ್ನಾ ಐಟಂ ಸಾಂಗ್ ಚಿತ್ರದ ಹೈಲೈಟ್.
ಯಶ್ ಗೆಟಪ್, ಡೈಲಾಗ್ ಡೆಲಿವರಿ ರೋಮಾಂಚನೊಗಳಿಸಿದರೆ, ಕ್ಯಾಮೆರಾ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದೆ. ಬಾಹುಬಲಿಯನ್ನೂ ಮೀರಿಸಲಿದೆ ಎನ್ನುವ ನಿರೀಕ್ಷೆಯನ್ನು ಟ್ರೇಲರ್ ಇನ್ನಷ್ಟು ಹೆಚ್ಚಿಸಿದೆ. ರಾಜಕುಮಾರನ ಮೂಲಕ ಇತಿಹಾಸ ಸೃಷ್ಟಿಸಿದ ವಿಜಯ್ ಕಿರಗಂದೂರು ಮತ್ತೊಂದು ಇತಿಹಾಸ ಸೃಷ್ಟಿಸಲಿ.