` ಪ್ರಿಯಾಂಕಾ ಉಪೇಂದ್ರ ಸುಪಾರಿ ಕೊಲೆಗೆ ಜಾಕ್ ಮಂಜು, ದಯಾಳ್  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
priyanka upendra aceepts supari kole
priyanka Upednra

ಪ್ರಿಯಾಂಕಾ ಉಪೇಂದ್ರ ಸುಪಾರಿ ಕೊಲೆಗೆ ದಯಾಳ್ ಪದ್ಮನಾಭನ್ ಮುಂದಾಗಿದ್ದಾರೆ. ಇದು ದಯಾಳ್ ನಿರ್ದೇಶಿಸಲು ಹೊರಟಿರುವ ಹೊಸ ಸಿನಿಮಾ. ಅದು ಶಿವಕುಮಾರ್ ಮಾವಲಿ ಎಂಬುವವರ ನಾಟಕ ಆಧರಿಸಿದ ಸಿನಿಮಾ. ಚಿತ್ರದ ಕಥೆ ಕೇಳಿ ಪ್ರಿಯಾಂಕಾ ಥ್ರಿಲ್ಲಾಗಿದ್ದಾರಂತೆ.

ಆ್ಯಕ್ಟರ್ ಮತ್ತು ಕರಾಳ ರಾತ್ರಿ ಚಿತ್ರಗಳ ನಂತರ ದಯಾಳ್ ಪದ್ಮನಾಭನ್ ವಿಭಿನ್ನ ಕಥೆಗಳ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದಲ್ಲೂ ಅಷ್ಟೆ, ಗಂಡನ ಕೊಲೆಗೆ ಸುಪಾರಿ ನೀಡುವ ಪತ್ನಿ, ಜೊತೆಯಲ್ಲೇ ತನ್ನ ಕೊಲೆಗೂ ಸುಪಾರಿ ಕೊಡುತ್ತಾಳೆ. ಪ್ರಿಯಾಂಕಾ ಉಪೇಂದ್ರ ಅವರನ್ನು ಥ್ರಿಲ್ಲಾಗಿಸಿರುವುದೇ ಅದು.

ದಯಾಳ್ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕರಾಗುತ್ತಿರುವುದು ಜಾಕ್ ಮಂಜು. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ನಂತರ ಜಾಕ್ ಮಂಜು ನಿರ್ಮಿಸುತ್ತಿರುವ ಸಿನಿಮಾ, ಮುಂದಿನ ವರ್ಷ ಸೆಟ್ಟೇರಲಿದೆ.