ನೀನ್ ಕೊಟ್ರೆ ನಾನ್ ಕೊಡ್ತೀನಿ. ನಾನ್ ಕೊಡ್ಲಿಲ್ಲ ಅಂದ್ರೆ ನೀನ್ ಕೊಡಲ್ಲ. ಇಷ್ಟು ವಿಶಾಲವಾದ ಪ್ರಪಂಚದಲ್ಲಿ ನೀನು ಪ್ರೀತಿ ಅನ್ನೋ ಪುಟ್ಟ ಸರ್ಕಲ್‍ನಲ್ಲಿ ನಿಂತಿದ್ದೀಯ. ಜೀವನದ ಪ್ರಾಬ್ಲಂ ಅನ್ನೋದು ಜೀಪ್ ರೂಪದಲ್ಲಿ ಬಂದ್ರೆ, ನೀನು ಸರ್ಕಲ್‍ನಿಂದ ಹೊರಗೆ ಬರ್ತೀಯಾ.. ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದ್ನೇಕಾಯ್. ಹೀಗೆ ಡೈಲಾಗ್ ಹೊಡೆದಿದ್ದ ಉಪೇಂದ್ರರ ಎ ಚಿತ್ರ ನೆನಪಿದ್ಯಾ..?
ಐ ಲವ್ ಯೂ ಎಂದು ಬೆನ್ನು ಬೀಳುವ ಚಾಂದಿನಿಗೆ, ಉಪೇಂದ್ರ ಜೀವನ ಪಾಠ ಮಾಡೋ ಎ ಚಿತ್ರದ ಆ ಸೀನ್ ಸೂಪರ್ ಹಿಟ್ ಆಗಿತ್ತು. ಈಗ.. ಅದೇ ಜಾಗದಲ್ಲಿ.. ಅದೇ ನಂದಿಬೆಟ್ಟದಲ್ಲಿ ಅದೇ ಉಪೇಂದ್ರ, ರಚಿತಾ ರಾಮ್‍ಗೆ ಐ ಲವ್ ಯೂ ಎಂದಿದ್ದಾರೆ. ಇದು ಐ ಲವ್ ಯೂ ಚಿತ್ರಕ್ಕಾಗಿ.
ಆರ್. ಚಂದ್ರು ನಿದೇಶನದ ಐ ಲವ್ ಯೂ ಚಿತ್ರದಲ್ಲಿ ಎ ಚಿತ್ರದ ಸೀನ್ ನೆನಪಿಸುವಂತೆ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇತಿಹಾಸವನ್ನು ನೆನಪಿಸಿಕೊಳ್ಳುವುದು ಯಾರಿಗಾದರೂ ಖುಷಿ ಕೊಡುತ್ತೆ. ಇದು ಎ ಚಿತ್ರದಂತೆ ತಲೆಗೆ ಹುಳ ಬಿಡಲ್ಲ. ನೋಡುಗನ ಹೃದಯ ತಟ್ಟುವ ಸಿನಿಮಾ ಎಂದಿದ್ದಾರೆ ಉಪೇಂದ್ರ.