ಬಾಲಿವುಡ್ ನಟಿ ಸನ್ನಿಲಿಯೋನ್ ಕೆಲವು ಕನ್ನಡ ಪರ ಸಂಘಟನೆಗಳ ವಿರೋಧದ ನಡುವೆಯೋ ಬೆಂಗಳೂರಿನಲ್ಲಿ ಫ್ಯೂಷನ್ ನೈಟ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸೇಸಮ್ಮ ಸೇಸಮ್ಮ ಬಾಗ್ಲು ತೆಗೆಯಮ್ಮ.. ಅನ್ನೋ ತಮ್ಮದೇ ಕನ್ನಡ ಹಾಡಿನ ಮೂಲಕ ಪ್ರೇಕ್ಷಕರ ಎದೆಗೆ ಕಿಚ್ಚು ಹಚ್ಚಿದ ಸನ್ನಿಲಿಯೋನ್, ಪ್ರೇಕ್ಷಕರನ್ನು ರಂಜಿಸಿದ್ರು.
ನಾನು ನಿಮ್ಮನ್ನು ತುಂಬಾ ತುಂಬಾ ಪ್ರೀತಿಸ್ತೀನಿ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು ಎಂದು ಕನ್ನಡದಲ್ಲಿಯೇ ಶುಭ ಕೋರಿದರು. ಕನ್ನಡದ ಪದಗಳನ್ನು ಹೇಳಿಕೊಟ್ಟ ನಿರೂಪಕ ರಿಯಾಜ್‍ಗೆ ಧನ್ಯವಾದ ಹೇಳಿದರು ಸನ್ನಿ ಲಿಯೋನ್.