ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ತೆಲುಗು ಚಿತ್ರರಂಗದಲ್ಲಿ ಹೊಳೆಯುತ್ತಿದ್ದಾರೆ. ವಿಜಯ್ ದೇವರಕೊಂಡ, ನಾನಿ, ನಾಗಾರ್ಜುನ ಜೊತೆ ನಟಿಸಿದ್ದ ರಶ್ಮಿಕಾ ಮಂದಣ್ಣ ಅವರಿಗೆ ಜ್ಯೂ.ಎನ್‍ಟಿಆರ್, ಅಲ್ಲು ಅರ್ಜುನ್ ಚಿತ್ರಗಳಿಂದಲೂ ಡಿಮ್ಯಾಂಡ್ ಇದೆ.
ಇದೆಲ್ಲದರ ನಡುವೆ ರಶ್ಮಿಕಾ ಮಂದಣ್ಣ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅದು ಸುಕುಮಾರ್ ನಿರ್ದೇಶನದ ಸಿನಿಮಾ. ಸದ್ಯಕ್ಕೆ ಕನ್ನಡದಲ್ಲಿ ಯಜಮಾನ ಚಿತ್ರದ ನಂತರ ಬೇರೆ ಯಾವುದೇ ಚಿತ್ರಗಳನ್ನು ರಶ್ಮಿಕಾ ಒಪ್ಪಿಕೊಂಡಿಲ್ಲ.