ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿ ಲವ್ವು ಇರಲೇಬೇಕು. ಅದು ಬೇರೆಯವರು ಯೋಚನೆ ಅಥವಾ ಕಲ್ಪನೆಯನ್ನೂ ಮಾಡಿಕೊಳ್ಳದ ರೀತಿಯಲ್ಲಿರುತ್ತೆ ಅನ್ನೋದ್ರಲ್ಲೂ ನೋ ಡೌಟು. ಭಟ್ಟರು ಪ್ರೀತಿಗೆ ರೂಪಕಗಳನ್ನು ಬಳುಸುವುದೇ ಒಂದು ಚೆಂದ.
ಮುಂಗಾರು ಮಳೆಯಲ್ಲಿ ಮೊಲ, ಗಾಳಿಪಟದಲ್ಲಿ ಗಾಳಿಪಟ, ನಗು, ಕಬಡ್ಡಿ, ಮೆಂಟಲ್ ಆಸ್ಪತ್ರೆ, ದನಗಳ ರೂಪಕಗಳನ್ನಿಟ್ಟುಕೊಂಡು ಪ್ರೇಮಕಥೆ ಹೇಳಿದ್ದ ಭಟ್ಟರು, ಹೊಸ ಚಿತ್ರ ಪಂಚತಂತ್ರದಲ್ಲಿ ಕಾರುಗಳ ಮೂಲಕ ಲವ್ಸ್ಟೋರಿ ಹೇಳುತ್ತಿದ್ದಾರೆ. ಪಂಚತಂತ್ರ ಚಿತ್ರದಲ್ಲಿ ಶೇ.40ರಷ್ಟು ಕಾರ್ ರೇಸ್ ಇರುತ್ತದಂತೆ. ಈ ಜಾನರ್ನ ಸಿನಿಮಾವನ್ನು ನಾನು ಇದುವರೆಗೆ ಮಾಡಿಲ್ಲ. ಈ ಸಿನಿಮಾ 20 ವರ್ಷದ ಯುವಕರಿಂದ 80 ವರ್ಷದ ಮುದುಕರವರೆಗೆ ಎಲ್ಲರಿಗೂ ಇಷ್ಟವಾಗಲಿದೆ ಅನ್ನೋ ಭರವಸೆ ಭಟ್ಟರಿಗಿದೆ.
ಚಿತ್ರದ ಕಾರ್ ರೇಸ್ ದೃಶ್ಯಗಳಿಗಾಗಿ ಜರ್ಮನಿಯಿಂದ ಕಾರುಗಳನ್ನು ತರಿಸಲಾಗಿದೆಯಂತೆ. ಮೊನೀಷ್ ಮತ್ತು ಚಂದನ್ ಎಂಬ ಇಬ್ಬರು ರೇಸರ್ಗಳು ಭಟ್ಟರ ಕೆಲಸವನ್ನು ಸುಲಭ ಮಾಡಿದರಂತೆ.
ವಿಹಾನ್ ಗೌಡ, ಸೋನಲ್ ಮಂಥೆರೋ, ಅಕ್ಷರಾ ಗೌಡ, ರಂಗಾಯಣ ರಘು, ಕರಿಸುಬ್ಬು ಮೊದಲಾದವರು ನಟಿಸಿರುವ ಸಿನಿಮಾ ಇದು. ಡಿಸೆಂಬರ್ನಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.