` ಶಿವಣ್ಣನೇ ಭೈರತಿ.. ಶಿವಣ್ಣನೇ ನಿರ್ಮಾಪಕ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar to produce bhairathi ranagallu movie
Shivarajkumar

ಮಫ್ತಿ ಚಿತ್ರದ ಭೈರತಿ ಬಣಗಲ್ ಪಾತ್ರ ಹಿಟ್ ಆಗಿದ್ದೇ ತಡ, ಅದೇ ಹೆಸರಿನ ಚಿತ್ರವೊಂದು ಸೆಟ್ಟೇರಲು ಸಿದ್ಧವಾಯ್ತು. ಕೆ.ಪಿ.ಶ್ರೀಕಾಂತ್ ನಿರ್ಮಾಪಕರೆಂದು ಘೋಷಿಸಿದ್ದೂ ಆಯ್ತು. ಮಫ್ತಿಗೆ ಜಯಣ್ಣ ನಿರ್ಮಾಪಕ. ಹೀಗಾಗಿ ಯಾರು ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಈಗ ಗೊತ್ತಾಗಿರೋ ಸ್ಪಷ್ಟ ಮಾಹಿತಿ ಪ್ರಕಾರ, ಭೈರತಿ ಬಣಗಲ್ ಅನ್ನೋ ಹೆಸರಿನ ಸಿನಿಮಾ ಆಗುತ್ತಿರೋದು ಸತ್ಯ. ಆ ಚಿತ್ರಕ್ಕೆ ಶಿವಣ್ಣನೇ ನಿರ್ಮಾಪಕ.

ಮಫ್ತಿ ಚಿತ್ರ ನಿರ್ದೇಶಿಸಿದ್ದ ನರ್ತನ್ ಅವರೇ ಭೈರತಿ ಬಣಗಲ್ ನಿರ್ದೇಶನ ಮಾಡಲಿದ್ದಾರಂತೆ. ಇದು ಶಿವರಾಜ್‍ಕುಮಾರ್‍ರ ಸಿನಿಮುತ್ತು ಕ್ರಿಯೇಷನ್ಸ್‍ನ ಮೊದಲ ಸಿನಿಮಾ ಆಗಲಿದೆ. 

ಶಿವರಾಜ್‍ಕುಮಾರ್ ಅಭಿನಯದ 125ನೇ ಸಿನಿಮಾ ಆಗಿ ಭೈರತಿ ರಣಗಲ್ಲು ಮೂಡಿ ಬರಲಿದೆ. ಚಿತ್ರದ ಟೈಟಲ್, ಮಫ್ತಿ ಚಿತ್ರದಲ್ಲಿನ ಅವರ ಪಾತ್ರದ ಸ್ಪೆಷಾಲಿಟಿಗೆ ತಕ್ಕಂತೆಯೇ ಕಥೆ ಹೆಣೆಯಲಾಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery