ದಿ ವಿಲನ್ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಚಿಂದಿ ಚಿಂದಿ ಉಡಾಯಿಸುತ್ತಿದೆ.ಎರಡನೇ ವಾರ ಮುಗಿಯುತ್ತಿರುವಾಗಲೇ ದಿ ವಿಲನ್ 50 ಕೋಟಿ ದಾಟಿ ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್ ಆದ ಮೂರನೇ ದಿನಕ್ಕೆ ಸಿನಿಮಾ 30 ಕೋಟಿ ಕಲೆಕ್ಷನ್ ಎಂದು ನಿರ್ಮಾಪಕ ಸಿ.ಆರ್.ಮನೋಹರ್ ಘೋಷಿಸಿದ್ದರು. ಈಗ ಸಿನಿಮಾ ಕಲೆಕ್ಷನ್ 50 ಕೋಟಿ ದಾಟಿದೆ ಎನ್ನುತ್ತಿವೆ ಮೂಲಗಳು.
ಮೊದಲನೇ ವಾರಕ್ಕೆ 50 ಕೋಟಿ ದಾಟಿರುವ ಸಿನಿಮಾ, 2ನೇ ವಾರದಲ್ಲಿ ಈಗಾಗಲೇ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ. ವಾರ ಮುಗಿಯುವುದರೊಳಗೆ ಕಲೆಕ್ಷನ್ ಇನ್ನೂ ದಾಟಬಹುದು ಎನ್ನುತ್ತಿವೆ ಬಾಕ್ಸಾಫೀಸ್ ಮೂಲಗಳು.
ಇನ್ನೊಂದು ಮೂಲದ ಪ್ರಕಾರ, ಚಿತ್ರದ ಕಲೆಕ್ಷನ್ 90 ಕೋಟಿ ದಾಟಿದೆ. ಆದರೆ, ಇದು ಸ್ವಲ್ಪ ಉತ್ಪ್ರೇಕ್ಷೆಯ ಮಾಹಿತಿ ಎನ್ನಬಹುದೇನೋ. ಆದರೆ, ಚಿತ್ರದ ಕ್ರೇಝ್ ಹಿಗೇ ಮುಂದುವರಿದರೆ ಕನ್ನಡದಲ್ಲಿ ದಿ ವಿಲನ್ ಮೊದಲ 100 ಕೋಟಿ ಸಿನಿಮಾ ಆಗೋದ್ರಲ್ಲಿ ಅನುಮಾನವಿಲ್ಲ.