` ಐಶ್ವರ್ಯಾ ಸರ್ಜಾ ಕೇಳಿದ ಸಿಡಿಲಿನಂತಾ ಪ್ರಶ್ನೆಗಳೇನು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
aishwarya sarja asks few questions to sruthi hariharan
Sruthi Hariharan, Aishwarya Sarja

ಶೃತಿ ಹರಿಹರನ್, ಅಜುನ್ ಸರ್ಜಾ ಮೇಲಿನ ಆರೋಪ ಕುರಿತಂತೆ ಐಶ್ವರ್ಯ ಸರ್ಜಾ, ತಮ್ಮ ತಂದೆಯ ಬೆಂಬಲಕ್ಕೆ ನಿಂತಿರೋದು ಗೊತ್ತಿರೋದೇ. ಈಗ.. ಶೃತಿ ಹರಿಹರನ್ ಅವರ ದೂರಿನ ನಂತರ ಐಶ್ವರ್ಯಾ ಸರ್ಜಾ ಕೆಲವೊಂದು ಪ್ರಶ್ನೆಗಳನ್ನೆತ್ತಿದ್ದಾರೆ.

ಶೃತಿ ಹರಿಹರನ್ ಅವರ ಬೆಂಬಲಕ್ಕೆ ನಿಂತಿರುವ ನಟ ಚೇತನ್, ಪ್ರೇಮಬರಹ ಚಿತ್ರಕ್ಕೆ ಮೊದಲು ಹೀರೋ ಆಗಿ ಆಯ್ಕೆಯಾಗಿದ್ದವರು. ಅವರ ಜೊತೆ ನಾನು ಫೋಟೋಶೂಟ್‍ನಲ್ಲಿ ಭಾಗವಹಿಸಿದ್ದೆ. ಅವರೂ ಕೂಡಾ ಆಗ ನನ್ನ ಜೊತೆ, ನನ್ನ ಬೆನ್ನು, ಸೊಂಟ ಮುಟ್ಟಿದ್ದಾರೆ. ಹೇಳಿ.. ನಾನು ಅದನ್ನು ಲೈಂಗಿಕ ಕಿರುಕುಳ ಎನ್ನಲೇ..?

ಇದು ಶೃತಿಗೆ, ಸರ್ಜಾ ಪುತ್ರಿ ಕೇಳುತ್ತಿರೋ ಪ್ರಶ್ನೆ. ಇದೊಂದು ಪಕ್ಕಾ ಪ್ರೀಪ್ಲಾನ್ ಎನ್ನುತ್ತಿರುವ ಐಶ್ವರ್ಯಾ, ಸುಮಾರು 1 ತಿಂಗಳ ಹಿಂದಷ್ಟೇ ಶೃತಿ, ಟ್ವಿಟರ್‍ನಲ್ಲಿ ತಮ್ಮ ತಂದೆಯನ್ನು ಅನ್‍ಫಾಲೋ ಮಾಡಿದ್ದರು ಎಂಬ ವಿಷಯ ಬಹಿರಂಗಪಡಿಸಿದ್ದಾರೆ. ಅಂದರೆ, ಕಿರುಕುಳ ನೀಡುವಾಗಲೂ, ಸಿನಿಮಾ ಮುಗಿದ ಮೇಲೂ, ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ ಮೇಲೂ ಸರ್ಜಾರನ್ನು ಟ್ವಿಟರ್‍ನಲ್ಲಿ ಫಾಲೋ ಮಾಡುತ್ತಲೇ ಇದ್ದ ಶೃತಿ ಹರಿಹರನ್, ಅರ್ಜುನ್ ಸರ್ಜಾ ಹೆಸರು ಹೇಳುವುದಕ್ಕೆ 1 ತಿಂಗಳ ಮೊದಲು ಟ್ವಿಟರ್‍ನಲ್ಲಿ ಅನ್‍ಫಾಲೋ ಮಾಡಿದ್ದಾರೆ. 

ಈಗ ಉತ್ತರಿಸಬೇಕಿರೋದು ಶೃತಿ ಹರಿಹರನ್.

Ayushmanbhava Movie Gallery

Ellidhe Illitanaka Movie Gallery