` ಸೆನ್ಸಾರ್ ಜೊತೆ ಗುದ್ದಾಡಿ ಗೆದ್ದ ತಾರಕಾಸುರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tarakasura gets censor clearance
Tarakasura

ತಾರಕಾಸುರ. ರಿಲೀಸ್‍ಗೆ ರೆಡಿಯಾಗಿರುವ ಈ ಸಿನಿಮಾವನ್ನು ಸೆನ್ಸಾರ್ ಅಧಿಕಾರಿಗಳು ಸರ್ಟಿಫಿಕೇಟ್ ಕೊಡದೆ ಬ್ಯಾನ್ ಮಾಡುವುದಾಗಿ ಹೇಳಿದ್ದರಂತೆ. ರಥಾವರದಂತಹ ಹಿಟ್ ಕೊಟ್ಟಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪಗೆ ಶಾಕ್ ಆಗುವುದೊಂದೇ ಬಾಕಿ. 

ಹೀಗೆ ಹೆದರಿಸಿದ್ದ ಸೆನ್ಸಾರ್ ಅಧಿಕಾರಿಗಳು 16 ಪ್ರಶ್ನೆಗಳನ್ನಿಟ್ಟರಂತೆ. ಆ 16 ಪ್ರಶ್ನೆಗಳಿಗೂ ಉತ್ತರ ಕೊಟ್ಟ ಬಂಡಿಯಪ್ಪ, ಯಾವುದಕ್ಕೂ ಬಗ್ಗುವುದಿಲ್ಲ ಎಂಬ ಸಂದೇಶ ಕೊಟ್ಟು, ಒಂದೇ ಒಂದು ಸೀನ್‍ಗೂ ಕತ್ತರಿ ಹಾಕಿಸಿಕೊಳ್ಳದೆ ಪ್ರಮಾಣ ಪತ್ರ ಪಡೆದಿದ್ದಾರೆ. 

ಆದರೆ, ತಾರಕಾಸುರ ಚಿತ್ರಕ್ಕೆ ಸಿಕ್ಕಿರುವುದು ಎ ಸರ್ಟಿಫಿಕೇಟ್. ಬುಡಬುಡಿಕೆ ಜನಾಂಗವನ್ನಿಟ್ಟುಕೊಂಡು ಮಾಡಿರುವ ಕಥೆ ಇದು. ತಾಯಿಗೆ ತಕ್ಕ ಮಗ ಚಿತ್ರಕ್ಕೂ ಸೆನ್ಸಾರ್ ಪ್ರಾಬ್ಲಂ ಎದುರಾಗಿರುವಾಗಲೇ ತಾರಕಾಸುರ ಸೆನ್ಸಾರ್ ಯುದ್ಧ ಗೆದ್ದ ಕಥೆ ಹೇಳಿಕೊಂಡಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery