` ಮೀಟೂ ಎಫೆಕ್ಟ್ - ನಿರ್ಮಾಪಕರ ರಕ್ಷಣೆಗೆ ಹೊಸ ಸಮಿತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
producers all set to start icc and gender sensitization
KFCC

ಮೀಟೂ ಬಿರುಗಾಳಿಗೆ ಸ್ಟಾರ್ ನಟರಷ್ಟೇ ಅಲ್ಲ, ಚಿತ್ರ ನಿರ್ಮಾಪಕ, ನಿರ್ದೇಶಕರೂ ಕಂಗಾಲಾಗಿದ್ದಾರೆ. ಸಿನಿಮಾದಲ್ಲಿ ಎಲ್ಲರ ಪಾತ್ರ ಮುಗಿದ ಮೇಲೆ ಈ ರೀತಿ ಆರೋಪ ಕೇಳಿ ಬಂದರೆ ಏನು ಮಾಡೋದು ಅನ್ನೋದು ನಿರ್ಮಾಪಕರು, ನಿರ್ದೇಶಕರ ಆತಂಕ. ಅರ್ಜುನ್ ಸರ್ಜಾ, ಶೃತಿ ಹರಿಹರನ್ ವಿಚಾರದಲ್ಲಿ ಸಂಧಾನ ಸಭೆಯೂ ಮುರಿದುಬಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡಿದೆ. 

ನಿರ್ಮಾಪಕರ ಹಿತರಕ್ಷಣೆಗಾಗಿ ಪ್ರೊಡ್ಯೂಸರ್ಸ್ ಪ್ರೊಟೆಕ್ಷನ್ ಕಮಿಟಿ (ಪಿಪಿಸಿ) ರಚನೆಗೆ ಮುಂದಾಗಿದೆ. ಈ ಸಮಿತಿಯಲ್ಲಿ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಇರುತ್ತಾರೆ. ವಾಣಿಜ್ಯ ಮಂಡಳಿಯ ಅಕ್ಟೋಬರ್ 30ರ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆಯಾಗಲಿದೆಯಂತೆ. ಎಲ್ಲವೂ ಚುರುಕಾಗಿ ನಡೆದರೆ, ಇನ್ನೊಂದೆರಡು ವಾರಗಳಲ್ಲಿ ಪಿಪಿಸಿ ಅಸ್ಥಿತ್ವಕ್ಕೆ ಬರಲಿದೆ.