ಶೃತಿ ಹರಿಹರನ್ ಅವರ ಮೀಟೂ ಆರೋಪ ಹಾಗೂ ಅರ್ಜುನ್ ಸರ್ಜಾ ತೇಜೋವಧೆಯ ಹಿಂದೆ ಕ್ರೈಸ್ತ ಮಿಷನರಿಗಳು ಹಾಗೂ ಕನ್ನಡದ ಇಬ್ಬರು ಸ್ಟಾರ್ ನಟರ ಕೈವಾಡವಿದೆಯಂತೆ. ಇಂಥಾದ್ದೊಂದು ಆರೋಪ ಮಾಡಿರೋದು ಪ್ರಶಾಂತ್ ಸಂಬರಗಿ. ಉದ್ಯಮಿಯೂ ಆಗಿರುವ ಪ್ರಶಾಂತ್, ಅರ್ಜುನ್ ಸರ್ಜಾ ಆಪ್ತರೂ ಹೌದು.
ಅರ್ಜುನ್ ಸರ್ಜಾ ಚೆನ್ನೈನಲ್ಲಿ 25 ಕೋಟಿ ಖರ್ಚು ಮಾಡಿ ಹನುಮಾನ್ ದೇಗುಲ ನಿರ್ಮಿಸುತ್ತಿದ್ದಾರೆ. ಈ ದೇಗುಲಕ್ಕೆ ಕ್ರೈಸ್ತ ಮಿಷನರಿಗಳ ವಿರೋಧವಿದೆ. ಹೀಗಾಗಿ ಆ ಜಾಲದ ಕುಮ್ಮಕ್ಕಿನಿಂದ ಕಮ್ಯುನಿಸ್ಟ್ ಮನಸ್ಥಿತಿಯ ಶೃತಿ ಹರಿಹರನ್, ದೇಶದ್ರೋಹದ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಅರ್ಜುನ್ ಸರ್ಜಾ ತೇಜೋವಧೆಗೆ ಮುಂದಾಗಿದ್ದಾರೆ. ಹಿಂದೂ ವಿರೋಧಿ ಶಕ್ತಿಗಳು, ಅರ್ಜುನ್ ಸರ್ಜಾ ವಿರುದ್ಧ ಒಂದಾಗಿವೆ. ಇದಕ್ಕೆ ಸಂಬಂಧಪಟ್ಟಂತೆ 400 ಪುಟಕ್ಕೂ ಹೆಚ್ಚು ದಾಖಲೆಗಳನ್ನು ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ ಪ್ರಶಾಂತ್ ಸಂಬರಗಿ.
ಪ್ರಶಾಂತ್ ಸಂಬರಗಿ ಆರೋಪ, ಇಡೀ ಮೀಟೂ ಅಭಿಯಾನದಲ್ಲಿ ಸಂಚಲನವನ್ನೇ ಮೂಡಿಸಿಬಿಟ್ಟಿದೆ.