` ಹೋರಾಟದ ನಟಿಯರ ಹೊಂದಾಣಿಕೆಯನ್ನೂ ನೋಡಿದ್ದೇನೆ - ಮೀಟೂಗೆ ಹರ್ಷಿಕಾ ಪೂಣಚ್ಚ ಶಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Harshika Ponnacha Image
Harshika Ponnacha

ಮೀಟೂ ಅಭಿಯಾನ, ಬಿರುಗಾಳಿ, ಸುಂಟರಗಾಳಿ, ಚಂಡಮಾರುತ, ಅಗ್ನಿಸ್ಫೋಟ, ಜ್ವಾಲಾಮುಖಿಯಾಗಿ ಸುಡುತ್ತಿರುವಾಗಲೇ, ಹರ್ಷಿಕಾ ಪೂಣಚ್ಚ, ಮೀಟೂ ಅಭಿಯಾನದಲ್ಲಿ ತೊಡಗಿರುವವರೆಲ್ಲ ಬೆಚ್ಚಿ ಬೀಳುವಂತಾ ಶಾಕ್ ಕೊಟ್ಟಿದ್ದಾರೆ. ಹೋರಾಟದ ನಟಿಯರ ಹೊಂದಾಣಿಕೆಯನ್ನೂ ನೋಡಿದ್ದೇನೆ ಎಂದಿರುವ ಹರ್ಷಿಕಾ ಪೂಣಚ್ಚ, ಪ್ರಸಿದ್ಧಿಗಾಗಿ ನಡೆಯುತ್ತಿರುವ ಮೀಟೂ ಹೋರಾಟವನ್ನು ಖಂಡಿಸಿದ್ದಾರೆ.

ಅನೇಕ ಹೋರಾಟಗಾರ್ತಿ ನಟಿಯರು ತಮಗೆ ಅಗತ್ಯವಿದ್ದಾಗ ದುಡ್ಡಿಗಾಗಿ, ಒಳ್ಳೆಯ ಚಾನ್ಸ್‍ಗಾಗಿ, ಅದ್ಧೂರಿ ಜೀವನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಪ್ರಸಿದ್ಧಿ ಹಾಗೂ ಎಲ್ಲ ಅನುಕೂಲಗಳನ್ನೂ ಪಡೆಯುತ್ತಾರೆ. ಎಲ್ಲ ಮುಗಿದ ಮೇಲೆ ಯಾರ ಜೊತೆ ಒಂದು ಕಾಲದಲ್ಲಿ ಚೆನ್ನಾಗಿದ್ದರೋ, ಅವರ ವಿರುದ್ಧವೇ ಆರೋಪ ಮಾಡುತ್ತಾರೆ ಎಂದಿರುವ ಹರ್ಷಿಕಾ ಪೂಣಚ್ಚ, ಇದು ಹೋರಾಟದ ವಿಧಾನವಲ್ಲ ಎಂದಿದ್ದಾರೆ.

ಹಾಗೆಂದು ಚಿತ್ರರಂಗ ಸಜ್ಜನರಷ್ಟೇ ಇರುವ ಕ್ಷೇತ್ರವೇನೂ ಅಲ್ಲ. ಅಲ್ಲಿಯೂ ಅಂತಹವರಿದ್ದಾರೆ. ನನಗೂ ಅಂತಹ ಅನುಭವಗಳಾಗಿವೆ. ಅವುಗಳನ್ನು ತಿರಸ್ಕರಿಸಿ ಬಂದಿದ್ದೇನೆ. ಅದರಿಂದಾಗಿ ಸೂಪರ್‍ಸ್ಟಾರ್‍ಗಳ ಜೊತೆ ನಟಿಸುವ ಅವಕಾಶಗಳೂ ತಪ್ಪಿವೆ. ಆದರೆ, ನಾನು ಹ್ಯಾಪಿಯಾಗಿದ್ದೇನೆ. ನಾನೇನು ಅನ್ನೋದು ಚಿತ್ರರಂಗದವರಿಗೂ ಗೊತ್ತಿದೆ. ಕೆಲವು ಪುರುಷರು ಕೆಟ್ಟವರಾಗಿರುತ್ತಾರೆ. ಬಲವಂತ ಮಾಡುತ್ತಾರೆ. ಹಾಗಂತ ಯಾರೂ ಅತ್ಯಾಚಾರ ಮಾಡೋದಿಲ್ಲ. ಮೃಗಗಳಂತೆ ವರ್ತಿಸುವುದಿಲ್ಲ. ಧೈರ್ಯವಾಗಿ ನೋ ಎಂದು ಹೇಳಿ ಹೊರಬನ್ನಿ. ಆ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಎರಡೂ ಕೈ ಸೇರಿದರೇನೇ ಚಪ್ಪಾಳೆ ಎಂದಿದ್ದಾರೆ ಹರ್ಷಿಕಾ ಪೂಣಚ್ಚ.

ಯಾವುದೇ ಚಿತ್ರರಂಗದಲ್ಲಿ ಸೂಪರ್‍ಸ್ಟಾರ್ ನಟಿಯರು ಇಂತಹ ಮೀಟೂ ಆರೋಪ ಮಾಡುತ್ತಿಲ್ಲ ಎಂದು ಕೂಡಾ ನೆನಪಿಸಿದ್ದಾರೆ.

Sagutha Doora Doora Movie Gallery

Popcorn Monkey Tiger Movie Gallery